ರಾಮನಗರ: ರಾಮನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಜು. 18ರ ಮಂಗಳವಾರದಂದು ಏರ್ಪಡಿಸಿರುವ ಉಚಿತ ನೇರ ಸಂದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ.
ಖಾಸಗಿ ಸಂಸ್ಥೆಯಾದ ಎಂ/ಎಸ್ ಐಐಎಫ್‌ಎಲ್ ಸಮಸ್ತ ಫೈನಾನ್ಸ್ ಲಿಮಿಟೆಡ್ ರವರು ಭಾಗವಹಿಸುತ್ತಿದ್ದು, ಉದ್ಯೋಗಾಂಕ್ಷಿಗಳನ್ನು ಬ್ರಾಂಚ್ ಮ್ಯಾನೇಜರ್ (ಮಹಿಳೆ & ಪುರಷ) ಹುದ್ದೆಗೆ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ 35 ವರ್ಷಕ್ಕಿಂತ ಕಡಿಮೆ ವಯಸ್ಸುಳ ((Salary: Upto 27000 ಇದ್ದು) ಅನುಭವ: ಬ್ರಾಂಚ್ ಮ್ಯಾನೇಜರ್ ಹುದ್ದೆಯಲ್ಲಿ ಕನಿಷ್ಠ ಒಂದು ವರ್ಷ ಅನುಭವ ಇರುವ) ಅಭ್ಯರ್ಥಿಗಳು ಹಾಗೂ ಸೇಲ್ಸ್ ಆಫೀಸರ್ (ಮಹಿಳೆ & ಪುರಷ) ಹುದ್ದೆಗೆ ಪಿಯುಸಿ ವಿದ್ಯಾರ್ಹತೆ ಹೊಂದಿರುವ 30 ವರ್ಷಕ್ಕಿಂತ ಕಡಿಮೆ ವಯಸ್ಸು (Salary: 16000 to 20000 ಇದ್ದು) ಅನುಭವ: Fresher & Experience ಇರುವ) ಅಭ್ಯಥಿಗಳು ಭಾಗವಹಿಸಬಹುದಾಗಿದೆ.
ಮತ್ತೊಂದು ಖಾಸಗಿ ಸಂಸ್ಥೆಯಾದ ಎಂ/ಎಸ್ ಲೈಟನಿಂಗ್ ಲಾಜಿಸ್ಟಿಕ್ಸ್ ಲಿಮಿಟೆಡ್ ರವರು ಭಾಗವಹಿಸುತ್ತಿದ್ದು, ಉದ್ಯೋಗಾಂಕ್ಷಿಗಳನ್ನು ಡೆಲಿವೆರಯ ಎಕ್ಸೆಕ್ಯೂಟಿವ್ ಹೈರಿಂಗ್ (ಪುರುಷ & ಮಹಿಳೆ) ಹುದ್ದೆಗೆ (All Over Karnataka) ಎಸ್‌ಎಸ್‌ಎಲ್‌ಸಿ, ಪಿಯುಸಿ ಅಥವಾ ಪದವಿ ವಿದ್ಯಾರ್ಹತೆ ಹೊಂದಿರುವ 30 ವರ್ಷಕ್ಕಿಂತ ಕಡಿಮೆ ವಯಸ್ಸುಳ (Salary: Upto 15000 ಇದ್ದು) ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ/ರೆಸ್ಯೂಮ್ (ಬಯೋಡೇಟಾ), ಇತ್ಯಾದಿ ದಾಖಲೆಗಳೊಂದಿಗೆ ಜು. 18ರ ಮಂಗಳವಾರ 10.30 ಕ್ಕೆ ಜಿಲ್ಲಾ ಕೌಶಲ್ಯ ಕೇಂದ್ರ/ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಪ್ರಕಾಶ್‌ಚಂದ್ರ ಕಾಂಪ್ಲೆಕ್ಸ್, ಕೆ.ಎಸ್.ಅರ್.ಟಿ.ಸಿ ಡಿಪೋ ಎದುರು ಬಿ.ಎಂ.ರಸ್ತೆ. ರಾಮನಗರ ಇಲ್ಲಿ ನಡೆಸುವ ನೇರ ಸಂದರ್ಶನ ಕಾರ್ಯಕ್ರಮಕ್ಕೆ ಹಾಜರಾಗಿ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗೆ 080-27273364, 9900331779 & 9964784178 ಗೆ ಸಂಪರ್ಕಿಸಬಹುದಾಗಿದೆ ಎಂದು ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.