Saturday, April 19, 2025
Google search engine

Homeರಾಜ್ಯರೇಪ್ ಕೇಸ್ :ಎಫ್ ಎಸ್ ಎಲ್ ವರದಿ ಬಳಿಕ ಮುನಿರತ್ನ ಪಕ್ಷದಿಂದ ಉಚ್ಚಾಟನೆ : ಆರ್....

ರೇಪ್ ಕೇಸ್ :ಎಫ್ ಎಸ್ ಎಲ್ ವರದಿ ಬಳಿಕ ಮುನಿರತ್ನ ಪಕ್ಷದಿಂದ ಉಚ್ಚಾಟನೆ : ಆರ್. ಅಶೋಕ್

ಬೆಂಗಳೂರು : ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಆರ್ ನಗರ ಶಾಸಕ ಮುನಿರತ್ನ ವಿಚಾರವಾಗಿ ನೋಟಿಸ್ ಕೊಟ್ಟಿದ್ದೇವೆ. ಎಫ್ ಎಸ್ ಎಲ್ ವರದಿ ಬಳಿಕ ಶಾಸಕ ಸ್ಥಾನದ ರಾಜೀನಾಮೆ ಪಡೆಯುತ್ತೇವೆ. ಪಕ್ಷದಿಂದಲೂ ಉಚ್ಚಾಟನೆ ಮಾಡುತ್ತೇವೆ ಎಂದು ವಿಧಾನಸೌಧದಲ್ಲಿ ವಿರೋಧ ಪಕ್ಷದ ನಾಯಕ ಅಶೋಕ್ ಹೇಳಿಕೆ ನೀಡಿದರು.

ಜಾತಿಗಣತಿ ಹೇಳಿ ಮಾಡಿಸಿದ್ದಾರೆಂದು ನಿಮ್ಮ ಪಕ್ಷದವರೇ ಹೇಳುತ್ತಿದ್ದಾರೆ. ಡಿಕೆ ಶಿವಕುಮಾರ್, ಕೆ. ಸುಧಾಕರ್, ಶಾಮನೂರು ಶಿವಶಂಕರಪ್ಪ ವಿರೋಧ ಮಾಡುತ್ತಿದ್ದಾರೆ. ಲಿಂಗಾಯತ ಸಮುದಾಯದವರು ಕೂಡ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ನಿಮ್ಮ ಗೊಂದಲಗಳನ್ನು ಬಿಜೆಪಿಯ ಮೇಲೆ ಹಾಕಬೇಡಿ ಎಂದು ತಿಳಿಸಿದರು.

ಬೆಳಗಾವಿ ಸಚಿವರು ರೋಡ್ ಶೋ ಮಾಡುತ್ತಿದ್ದಾರೆ. ಉದ್ಯಮಿಗಳು ಮಾಡುವ ರೀತಿ ಸಚಿವರು ರೋಡ್ ಶೋ ಮಾಡುತ್ತಿದ್ದಾರೆ.ಕೊಡಗು, ಚಾಮರಾಜನಗರ, ಚಿಕ್ಕಮಂಗಳೂರು ಕಡೆಗೆ ರೋಡ್ ಶೋ ನಡೆಸಿದ್ದಾರೆ. ನಾನೇ ಸಿಎಂ ನಾನೇ ಸಿಎಂ ಅಂತ ಯಾರು ಹೇಳುತ್ತಿದ್ದಾರೆ? ಡಿಕೆ ಹೇಳಿಕೆಗಳಿಗೆ ಕಡಿವಾಣ ಹಾಕ್ತಿನಿ ನೋಟಿಸ್ ಕೊಡುತ್ತೇವೆ ಅಂದ್ರು.ಕಾಂಗ್ರೆಸ್ನವರ ತಟ್ಟೆಯಲ್ಲಿ ಸತ್ತ ಹೆಣ ಬಿದ್ದಿದೆ. ಬಿಜೆಪಿ ತಟ್ಟೆಯಣ್ಣನ ಹುಡುಕಲು ಬರುತ್ತಿದ್ದಾರೆ ಎಂದು ವಿಧಾನಸೌಧದಲ್ಲಿ ಕಾಂಗ್ರೆಸ್ ವಿರುದ್ಧ ಆರ್ ಅಶೋಕ್ ವಾಗ್ದಾಳಿ ನಡೆಸಿದರು.

ಡಿಸಿಎಂ ಡಿಕೆ ಡಿಸೆಂಬರ್ ಬಳಿಕ ಸಿಎಂ ಆಗುವ ಕನಸಿನಲ್ಲಿ ಇದ್ದಾರೆ. ಸಿಎಂ ಸ್ಥಾನ ಸಿಗಲಿ ಅಂತ ಡಿಸಿಎಂ ಡಿಕೆ ಶಿವಕುಮಾರ್ ಹೋಮ ಪೂಜೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಕುಂಕುಮ ಹಾಕುತ್ತಿರಲಿಲ್ಲ, ಈಗ ಹಾಕುತ್ತಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಸ್ಮಶಾನದಲ್ಲಿ ಪೂಜೆ ಮಾಡಿಸ್ತಾರೆ. ಡಾ. ಜಿ ಪರಮೇಶ್ವರ್ ಸಿದ್ದಗಂಗಾ. ಮಠದಲ್ಲಿ ಪೂಜೆ ಮಾಡಿಸ್ತಾರೆ.ಕಾಂಗ್ರೆಸ್ ಸರ್ಕಾರದಲ್ಲಿ ಒಂದೇ ಒಂದು ಅಭಿವೃದ್ಧಿ ಕಾರ್ಯ ಆಗಿಲ್ಲ. ಸರ್ಕಾರಿ ಶಾಲೆಗಳು ಸೋರುತ್ತಿವೆ. ನೀರಾವರಿ ಯೋಜನೆ ಇಲ್ಲ ಹಗರಣ ಬಿಟ್ಟರೆ ಬೇರೆ ಏನು ಆಗುತ್ತಿಲ್ಲ ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular