Saturday, April 19, 2025
Google search engine

Homeಸ್ಥಳೀಯಯೋಗ ಚಾರಣ ಮತ್ತು ದುರ್ಗಾ ನಮಸ್ಕಾರಕ್ಕೆ ಸಾಕ್ಷಿಯಾದ ಚಾಮುಂಡಿ ಬೆಟ್ಟದ ದೇವಸ್ಥಾನದ ಆವರಣ

ಯೋಗ ಚಾರಣ ಮತ್ತು ದುರ್ಗಾ ನಮಸ್ಕಾರಕ್ಕೆ ಸಾಕ್ಷಿಯಾದ ಚಾಮುಂಡಿ ಬೆಟ್ಟದ ದೇವಸ್ಥಾನದ ಆವರಣ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ 7ನೇ ದಿನವಾದ ಇಂದು ಯೋಗ ದಸರಾ ಉಪಸಮಿತಿ ವತಿಯಿಂದ ಚಾಮುಂಡಿ ಬೆಟ್ಟದ ತಪ್ಪಲು ಮತ್ತು ದೇವಸ್ಥಾನದ ಆವರಣದಲ್ಲಿ ಯೋಗ ಚಾರಣ ಮತ್ತು ದುರ್ಗಾ ನಮಸ್ಕಾರ’ ಕಾರ್ಯಕ್ರಮವನ್ನು ನಡೆಸಲಾಯಿತು.

ಯೋಗ ಅಧಿಕಾರೇತರ ಉಪಸಮಿತಿಯ ಅಧ್ಯಕ್ಷರಾದ ಎಂ.ಮಹೇಶ್ ಅವರು ಸಮಾರಂಭವನ್ನು ಉದ್ಘಾಟನೆ ಮಾಡಿದರು. ಯೋಗ ಸರಪಳಿಯಲ್ಲಿ ಯೋಗಪಟುಗಳು, ವಿದ್ಯಾರ್ಥಿಗಳು ಹಾಗೂ ಯುವಕರು, ಹಿರಿಯ, ಸಾರ್ವಜನಿಕರು ಸೇರಿದಂತೆ ಮೈಸೂರಿನ ವಿವಿಧೆಡೆಯಿಂದ ಆಗಮಿಸಿದ್ದ ಸುಮಾರು 250 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಬೆಳಗ್ಗೆ 7 ಗಂಟೆಗೆ ಚಾಮುಂಡಿ ಬೆಟ್ಟದ ಆವರಣದಲ್ಲಿ ನೆರೆದಿದ್ದ ಜನರ ದೃಶ್ಯವು ಮೈಸೂರಿನ ಸೊಬಗನ್ನು ಹೆಚ್ಚಿಸಿತು.

RELATED ARTICLES
- Advertisment -
Google search engine

Most Popular