Saturday, April 19, 2025
Google search engine

Homeರಾಜ್ಯಸುದ್ದಿಜಾಲಚಾಮರಾಜನಗರ ಜಿಲ್ಲಾ ದಸರಾದಲ್ಲಿ ಗಮನ ಸೆಳೆದ ಭಕ್ತಿ ಗೀತೆ ಗಾಯನ

ಚಾಮರಾಜನಗರ ಜಿಲ್ಲಾ ದಸರಾದಲ್ಲಿ ಗಮನ ಸೆಳೆದ ಭಕ್ತಿ ಗೀತೆ ಗಾಯನ

ಯಳಂದೂರು: ಚಾಮರಾಜನಗರದಲ್ಲಿ ಬುಧವಾರ ನಡೆದ ಚೆಲುವ ಚಾಮರಾಜನಗರ ಜಿಲ್ಲಾ ದಸರಾ ಮಹೋತ್ಸವದ ನಿಮಿತ್ತ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ನಡೆದ ತಾಲೂಕಿನ ಕೆಸ್ತೂರು ಗ್ರಾಮದ ಶ್ರೀ ಶಿವಕುಮಾರಸ್ವಾಮಿ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ನಡೆದ ಭಕ್ತಿಗೀತೆ ಗಾಯನ ಕಾರ್ಯಕ್ರಮವು ಗಮನ ಸೆಳೆಯಿತು.

ಸಂಘದ ಸದಸ್ಯರು ಮಲೆ ಮಹದೇಶ್ವರ, ಮಂಟೇಸ್ವಾಮಿ, ಸಿದ್ದಪ್ಪಾಜಿ, ಬಿಳಿಗಿರಿರಂಗನಾಥಸ್ವಾಮಿ ಸೇರಿದಂತೆ ವಿವಿಧ ದೇವ, ದೇವತೆಯರ ಭಕ್ತಿಗೀತಾ ಗಾಯನವು ಗಮಸ ಸೆಳೆಯಿತು. ಗಾಯಕರಾದ ಎಂ. ಪರಶಿವಪ್ಪ, ಶಾಂತಮೂರ್ತಿ, ಬಸವಣ್ಣಚಾರ್, ಕೆ.ಎಸ್. ನಾಗರಾಜು ಗಾನಸುಧೆಯನ್ನು ಹರಿಸಿದರೆ, ಕೆ.ಎಸ್.ಪುಟ್ಟಣ್ಣ ತಬಲಾ, ರಾಜೇಶ್, ಕೀಬೋರ್ಡ್, ಕೆ.ಬಿ. ಬಸವಣ್ಣ ಘಟಂ ಬಾರಿಸುವ ಮೂಲಕ ಇವರಿಗೆ ಸಾಥ್ ನೀಡಿದರು.

RELATED ARTICLES
- Advertisment -
Google search engine

Most Popular