ಯಳಂದೂರು: ಯಳಂದೂರು ತಾಲೂಕು ಭೂ ನ್ಯಾಯಮಂಡಳಿ ಸದಸ್ಯರ ಪಟ್ಟಿಯನ್ನು ಸರ್ಕಾರದ ಅಧೀನ ಕಾರ್ಯದರ್ಶಿ ಕಂದಾಯ ಇಲಾಖೆಯ (ಭೂ ಸುಧಾರಣೆ) ಅಧೀನ ಕಾರ್ಯದರ್ಶಿ ಆರ್. ಗೌರಮ್ಮ ನೇಮಕ ಮಾಡಿದ್ದಾರೆ.
ಕೊಳ್ಳೇಗಾಲ ಉಪವಿಭಾಗ ವ್ಯಾಪ್ತಿಗೆ ಒಳಪಡುವ ತಾಲೂಕಿನ ಮಂಡಳಿಗೆ ಅಧ್ಯಕ್ಷರಾಗಿ ಸಹಾಯಕ ಆಯುಕ್ತರು ಕೊಳ್ಳೇಗಾಲ ಉಪವಿಭಾಗ, ಸದಸ್ಯರಾಗಿ ಕೆಸ್ತೂರು ಗ್ರಾಮದ ಕೆ.ಆರ್. ಗುರುರಾಜ್ ಸೇರಿದಂತೆ ತಾಲೂಕಿನ ಒಟ್ಟು ನಾಲ್ಕು ಮಂದಿ ಸದಸ್ಯರು ಹಾಗೂ ಸದಸ್ಯ ಕಾರ್ಯದರ್ಶಿಯಾಗಿ ಯಳಂದೂರು ತಹಶೀಲ್ದಾರ್ ಇರಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿಲಾಗಿದೆ.