Saturday, April 19, 2025
Google search engine

Homeರಾಜ್ಯಒಂದು ರಾಷ್ಟ್ರ, ಒಂದು ಚುನಾವಣೆ ಪ್ರಸ್ತಾಪದ ವಿರುದ್ಧ ಕೇರಳ ಸರ್ಕಾರದಿಂದ ನಿರ್ಣಯ ಅಂಗೀಕಾರ

ಒಂದು ರಾಷ್ಟ್ರ, ಒಂದು ಚುನಾವಣೆ ಪ್ರಸ್ತಾಪದ ವಿರುದ್ಧ ಕೇರಳ ಸರ್ಕಾರದಿಂದ ನಿರ್ಣಯ ಅಂಗೀಕಾರ

ತಿರುವನಂತಪುರಂ: ಭಾರತ ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವುದರ ವಿರುದ್ಧ ಕೇರಳ ವಿಧಾನಸಭೆ ಇಂದು ಗುರುವಾರ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿದೆ.

ಈ ನಿರ್ಣಯದಲ್ಲಿ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಮಿತಿಯು ಶಿಫಾರಸು ಮಾಡಿದ ಒಂದು ರಾಷ್ಟ್ರ, ಒಂದು ಚುನಾವಣೆ ಪ್ರಸ್ತಾವನೆಯನ್ನು ಅಂಗೀಕರಿಸುವ ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಸದನವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿತು.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪರವಾಗಿ ಕೇರಳ ಸಂಸದೀಯ ವ್ಯವಹಾರಗಳ ಸಚಿವ ಎಂ.ಬಿ. ರಾಜೇಶ್ ನಿರ್ಣಯ ಮಂಡಿಸಿದರು. ಈ ಪ್ರಸ್ತಾಪವು ದೇಶದ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಭಾರತದ ಸಂಸದೀಯ ಪ್ರಜಾಪ್ರಭುತ್ವದ ವೈವಿಧ್ಯಮಯ ಸ್ವರೂಪವನ್ನು ಹಾಳು ಮಾಡುತ್ತದೆ ಎಂದು ಸಚಿವ ರಾಜೇಶ್ ಹೇಳಿದರು.

ಇದು ದೇಶದ ವಿವಿಧ ರಾಜ್ಯಗಳ ವಿಧಾನಸಭೆಗಳು ಮತ್ತು ಸ್ಥಳೀಯ ಸ್ವಯಂ ಸರ್ಕಾರಗಳ ಅವಧಿಯನ್ನು ಕಡಿತಗೊಳಿಸಲು ಕಾರಣವಾಗುತ್ತದೆ ಎಂದು ರಾಜೇಶ್ ಹೇಳಿದರು.

RELATED ARTICLES
- Advertisment -
Google search engine

Most Popular