Saturday, April 19, 2025
Google search engine

Homeರಾಜ್ಯಪದೇ ಪದೇ ಕರ್ನಾಟಕ ಹಾಗೂ ದಕ್ಷಿಣ ಭಾರತದ ರಾಜ್ಯಗಳಿಗೆ ತೆರಿಗೆ ಪಾಲಿನಲ್ಲಿ ಮೋಸವಾಗುತ್ತಿದೆ: ಡಿ.ಕೆ ಸುರೇಶ್...

ಪದೇ ಪದೇ ಕರ್ನಾಟಕ ಹಾಗೂ ದಕ್ಷಿಣ ಭಾರತದ ರಾಜ್ಯಗಳಿಗೆ ತೆರಿಗೆ ಪಾಲಿನಲ್ಲಿ ಮೋಸವಾಗುತ್ತಿದೆ: ಡಿ.ಕೆ ಸುರೇಶ್ ಆಕ್ರೋಶ

ಬೆಂಗಳೂರು: “ಪದೇ, ಪದೇ ಕರ್ನಾಟಕ ಹಾಗೂ ದಕ್ಷಿಣ ಭಾರತದ ರಾಜ್ಯಗಳಿಗೆ ತೆರಿಗೆ ಪಾಲಿನಲ್ಲಿ ಮೋಸವಾಗುತ್ತಿದೆ. ಕನ್ನಡಿಗರು ಹಾಗೂ ದಕ್ಷಿಣ ಭಾರತೀಯರ ಮನಸ್ಸನ್ನು ಕೇಂದ್ರ ಸರ್ಕಾರ ಕೆಣಕುತ್ತಿದೆ” ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಕಿಡಿಕಾರಿದರು.

ರಾಜ್ಯಗಳಿಗೆ ತೆರಿಗೆ ಹಂಚಿಕೆ ಬಗ್ಗೆ ಕೇಂದ್ರ ಸರ್ಕಾರ ಗುರುವಾರ ಬಿಡುಗಡೆ ಮಾಡಿದ ಪಟ್ಟಿಯ ಬಗ್ಗೆ ಮಾಧ್ಯಮದವರು ಸದಾಶಿವನಗರ ನಿವಾಸದ ಬಳಿ ಶುಕ್ರವಾರ ಕೇಳಿದಾಗ ಸುರೇಶ್ ಅವರು ಹೀಗೆ ಉತ್ತರಿಸಿದರು.

“ಕನ್ನಡಿಗರಿಗೆ ಆಗುತ್ತಿರುವ ಮೋಸವನ್ನು ಬಹಳ ದುಃಖದಿಂದ ಹೇಳುತ್ತಿದ್ದೇನೆ. ದೇಶದಲ್ಲಿಯೇ ಅತ್ಯಂತ ಹೆಚ್ಚು ತೆರಿಗೆ ಪಾವತಿಸುವ ಎರಡನೇ ರಾಜ್ಯ ಕರ್ನಾಟಕಕ್ಕೆ 6,498 ಕೋಟಿ ರೂಪಾಯಿ ಕೊಡಲಾಗಿದೆ. ದಕ್ಷಿಣ ಭಾರತ ರಾಜ್ಯಗಳಿಗೆ ಒಟ್ಟಾರೆ 28,152 ಕೋಟಿ ರೂಪಾಯಿ ತೆರಿಗೆ ಪಾಲು ಕೊಡಲಾಗಿದೆ. ಆದರೆ ಉತ್ತರ ಪ್ರದೇಶ ರಾಜ್ಯವೊಂದಕ್ಕೆ 31,962 ಕೋಟಿ ರೂಪಾಯಿ ನೀಡಲಾಗಿದೆ. ನಮಗೆ ಈಗಾಗಲೇ ಆಗಿರುವ ಅನ್ಯಾಯವನ್ನಾದರೂ ಕನಿಷ್ಠ ಪಕ್ಷ ಸರಿದೂಗಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬಹುದಿತ್ತು. 2022 ರ ಕೇಂದ್ರ ಬಜೆಟ್ ಸಂದರ್ಭದಲ್ಲಿಯೇ ರಾಜ್ಯಗಳ ತೆರಿಗೆ ಪಾಲಿನ ತಾರತಮ್ಯದ ಬಗ್ಗೆ ನಾನು ದನಿಯೆತ್ತಿದ್ದೆ. ಅದರಲ್ಲೂ ಕರ್ನಾಟಕಕ್ಕೆ ಮತ್ತು ದಕ್ಷಿಣ ಭಾರತ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದ್ದೆ” ಎಂದು ಹೇಳಿದರು.

“ಉತ್ತರ ಭಾರತ ರಾಜ್ಯಗಳಂತೆ, ದಕ್ಷಿಣ ಭಾರತದ ರಾಜ್ಯಗಳನ್ನು ಕೇಂದ್ರ ಸರ್ಕಾರ ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು. ನಮ್ಮ ರಾಜ್ಯಗಳ ಅಭಿವೃದ್ದಿಗೆ ಪೂರಕವಾಗಿ ನಿಲ್ಲಬೇಕು ಎನ್ನುವ ಆಲೋಚನೆ ಕೇಂದ್ರ ಸರ್ಕಾರಕ್ಕೆ ಬರಬೇಕುಎಂದು ಹೇಳಿದರು.

“ಬಿಜೆಪಿ ಹಾಗೂ ಮಿತ್ರಪಕ್ಷದ 19 ಮಂದಿ ಸಂಸತ್ ಸದಸ್ಯರನ್ನು ಕರ್ನಾಟಕದಿಂದ ಕಳುಹಿಸಲಾಗಿದೆ. ಕಳೆದ 5 ಚುನಾವಣೆಗಳಲ್ಲಿ ಅತಿ ಹೆಚ್ಚು ಸಂಸದರನ್ನು ಕರ್ನಾಟಕದಿಂದ ಕಳುಹಿಸಿದರೂ ಏಕೆ ಈ ಧೋರಣೆ ಕರ್ನಾಟಕದ ಜನರ ಮೇಲೆ ಮಲತಾಯಿ ಮತ್ಸರವೇಕೆ ವಿಜಯದಶಮಿಯ ದಿನ ಕರ್ನಾಟಕಕ್ಕೆ ನ್ಯಾಯ ಒದಗಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕು ಎಂದು ಹಕ್ಕೋತ್ತಾಯ ಮಾಡುತ್ತಿದ್ದೇನೆ” ಎಂದು ಹೇಳಿದರು.

RELATED ARTICLES
- Advertisment -
Google search engine

Most Popular