Sunday, April 20, 2025
Google search engine

Homeರಾಜ್ಯಯದುವಂಶಕ್ಕೆ ಹೊಸ ಸದಸ್ಯ ಸೇರ್ಪಡೆ…ತ್ರಿಷಿಕಾಗೆ ಗಂಡು ಮಗು ಜನನ... ಅರಮನೆಯಲ್ಲಿ ಸಂಭ್ರಮ

ಯದುವಂಶಕ್ಕೆ ಹೊಸ ಸದಸ್ಯ ಸೇರ್ಪಡೆ…ತ್ರಿಷಿಕಾಗೆ ಗಂಡು ಮಗು ಜನನ… ಅರಮನೆಯಲ್ಲಿ ಸಂಭ್ರಮ

ಮೈಸೂರು: ಯದುವಂಶಕ್ಕೆ ಹೊಸ ಸದಸ್ಯ ಸೇರ್ಪಡೆಯಾಗಿದೆ.ಯದುವಂಶದ ಯವರಾಣಿ ತ್ರಿಷಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಮೈಸೂರಿನ ಯಾದವಗಿರಿಯಲ್ಲಿರುವ ಮದರ್ ಹುಡ್ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದಾರೆ.ಆದ್ಯವೀರ್ ಗೆ ಸಹೋದರ ಪ್ರಾಪ್ತಿಯಾಗಿದೆ.ಒಂದೆಡೆ ಅರಮನೆಯಲ್ಲಿ ಸಂಭ್ರಮದ ವಾತಾವರಣ ಇದೆ.ಮತ್ತೊಂದೆಡೆ ಸೂತಕದ ಹಿನ್ನಲೆ ಪೂಜಾ ಕೈಂಕರ್ಯಗಳಿಗೆ ಅಡ್ಡಿಯಾಗಲಿದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ.ಬೆಂಗಳೂರಿನ ವೈದ್ಯರ ತಂಡ ಮೈಸೂರಿನ ವೈದ್ಯರ ತಂಡದ ನೆರವು ಪಡೆದು ಹೆರಿಗೆ ಪ್ರಕ್ರಿಯೆ ಯಶಸ್ವಿಗೊಳಿಸಿದ್ದಾರೆ.ಈಗಾಗಲೇ ಯದುವೀರ್ ರವರು ಕಂಕಣ ತೊಟ್ಟಿದ್ದಾರೆ.

ಮಗು ಹುಟ್ಟಿದಾಗ ಸಂಪ್ರದಾಯವಾಗಿ ಸೂತಕ ಆಚರಿಸುವ ವಾಡಿಕೆ ಇದೆ.ಈಗ ಅರಮನೆಯಲ್ಲಿ ಹೇಗೆ ಪೂಜಾ ಕೈಂಕರ್ಯಗಳು ನಡೆಯುತ್ತದೆ ಎಂಬ ಅಂಶ ಕುತೂಹಲಕ್ಕೆ ಕಾರಣವಾಗಿದೆ.ಈ ಕುರಿತಂತೆ ಮುಂದಿನ ಪೂಜಾ ವಿಧಿವಿಧಾನಗಳನ್ನ ಮುಂದುವರೆಸುವ ಬಗ್ಗೆ ಅರಮನೆ ಪುರೋಹಿತರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಅರಮನೆ ಮೂಲಗಳಿಂದ ತಿಳಿದು ಬಂದಿದೆ…

RELATED ARTICLES
- Advertisment -
Google search engine

Most Popular