Sunday, April 20, 2025
Google search engine

Homeರಾಜ್ಯದೇವರ ದಯೆಯಿಂದ ಅಪಘಾತದಲ್ಲಿ ದೊಡ್ಡ ಅನಾಹುತ ತಪ್ಪಿದೆ: ವಿ. ಸೋಮಣ್ಣ ಪ್ರತಿಕ್ರಿಯೆ

ದೇವರ ದಯೆಯಿಂದ ಅಪಘಾತದಲ್ಲಿ ದೊಡ್ಡ ಅನಾಹುತ ತಪ್ಪಿದೆ: ವಿ. ಸೋಮಣ್ಣ ಪ್ರತಿಕ್ರಿಯೆ

ಬೆಂಗಳೂರು: ಮೈಸೂರು-ದರ್ಬಾಂಗ ಎಕ್ಸ್‌ಪ್ರೆಸ್ ರೈಲು ಅಪಘಾತದಲ್ಲಿ ೧೯ ಜನರು ಗಾಯಗೊಂಡಿದ್ದು, ಇಬ್ಬರಿಗೆ ಗಂಭೀರವಾಗಿ ಗಾಯವಾಗಿದೆ. ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ ಎಂದು ರೈಲ್ವೆ ಇಲಾಖೆ ರಾಜ್ಯ ಸಚಿವ ಸೋಮಣ್ಣ ತಿಳಿಸಿದ್ದಾರೆ.

ಅಪಘಾತದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಿನ್ನೆ ತುಂಬಾ ಒಳ್ಳೇ ದಿನ, ದೇವರ ದಯೆಯಿಂದ ಅಪಘಾತದಲ್ಲಿ ದೊಡ್ಡ ಅನಾಹುತ ತಪ್ಪಿದೆ. ಎಲ್ಲ ಪ್ರಯಾಣಿಕರನ್ನೂ ಮೆಮು ಟ್ರೈನ್ ಮೂಲಕ ಶಿಫ್ಟ್ ಮಾಡಲಾಗಿದೆ. ಪ್ರಯಾಣಿಕರಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಇಂದು ಅವರು ಎಲ್ಲೆಲ್ಲಿಗೆ ತಲುಪಬೇಕು ಅಲ್ಲಿಗೆ ವ್ಯವಸ್ಥೆ ಮಾಡಲಾಗುವುದು. ಯಾವ ಕಾರಣಕ್ಕೆ ಅಪಘಾತವಾಯ್ತು ಎಂದ ತನಿಖೆಯಾಗಬೇಕಿದೆ ಎಂದು ಹೇಳಿದರು.

ನಿನ್ನೆಯೇ ಸ್ಥಳೀಯರು ರೈಲಿನಲ್ಲಿದ್ದವರನ್ನು ರಕ್ಷಿಸಲಾಗಿದೆ. ತಮಿಳುನಾಡು ಪೊಲೀಸರು, ರೈಲ್ವೆ ಅಧಿಕಾರಿಗಳು, ಎನ್‌ಡಿಆರ್‌ಎಫ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಮಾಡಿದ್ದಾರೆ. ಗಾಯಗೊಂಡವರನ್ನ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಅಪಘಾತದಲ್ಲಿ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಆದರೂ ಶ್ವಾನ ದಳದಿಂದ ಯಾರಾದ್ರೂ ನಾಪತ್ತೆಯಾಗಿದ್ದಾರಾ ಎಂದು ಹುಡುಕಾಟ ನಡೆದಿದೆ. ರೈಲ್ವೆ ಇಲಾಖೆ ಸಹಾಯವಾಣಿ ಕೂಡ ಓಪನ್ ಮಾಡಿದೆ. ಪ್ರಯಾಣಿಕರ ಬಗ್ಗೆ ಮಾಹಿತಿ ನೀಡುತ್ತಿದೆ. ಬದುಕುಳಿದ ಪ್ರಯಾಣಿಕರು ಅಪಘಾತದ ಬಗ್ಗೆ ಮಾಹಿತಿ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular