ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿ ಮೆರವಣಿಗೆಗೆ ಕ್ಷಣಗಣನೆ ಶುರುವಾಗಿದ್ದು, ಮೈಸೂರಿನ ಸೀತಾವಿಲಾಸ ರಸ್ತೆಯಲ್ಲಿರುವ ಹಜರತ್ ಇಮಾಮ್ ಷಾ ವಲಿ ದರ್ಗಾದಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದೆ.
ಅಂಬಾರಿ ಹೊತ್ತು ಸಾಗಲಿರುವ ಕ್ಯಾಪ್ಟನ್ ಅಭಿಮನ್ಯುವಿಗೆ ವಿಶೇಷ ಆಶೀರ್ವಾದ ಮಾಡಲಾಗಿದೆ. ಮೌಲಿಗಳು ಭಸ್ಮ ಹಚ್ಚಿ, ಸಾಂಬ್ರಾಣಿ ಹೊಗೆ ಹಾಕಿ, ನವಿಲು ಗರಿಯಲ್ಕಿ ದೂವಾ ಮಾಡಿದ್ದಾರೆ. ದಸರಾ ಗಜಪಡೆಯ ಎಲ್ಲಾ ಆನೆಗಳಿಗೂ ವಿಶೇಷ ಆಶೀರ್ವಾದ ಮಾಡಿದ ದರ್ಗಾದ ಮುಖ್ಯಸ್ಥರು. ಮೌಲಿಗಳು ಎರಡು ಅನೆಗಳಿಗೆ ತಾಯತ ಕಟ್ಟಿದ್ದಾರೆ.