ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂ ಸವಾರಿಗೆ ಕೌಂಟ್ ಡೌನ್ ಶುರುವಾಗಿದೆ. ಐತಿಹಾಸಿಕ ಜಂಬೂ ಸವಾರಿ ಕಣ್ತುಂಬಿಕೊಳ್ಳಲು ಜನರು ಕಾತರುದಿಂದ ಕಾಯುತ್ತಿದ್ದಾರೆ. ಚಾಮುಂಡಿಶ್ವೇರಿ ದೇವಿಯ ಮೂರ್ತಿ ಉತ್ಸವ ಚಾಮುಂಡಿ ಬೆಟ್ಟದಿಂದ ಅರಮನೆ ನಗರಕ್ಕೆ ಹೊರಟಿದೆ.
ಸಿಎಂ ಸಿದ್ದರಾಮಯ್ಯ ಅವರು ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ಅರಮನೆಯತ್ತ ಹೊರಟಿದೆ. ಅದ್ಧೂರಿಯಾಗಿ ದಸರಾ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಅರಮನೆಯಲ್ಲಿ ಜಟ್ಟಿ ಕಾಳಗ ನಡೆಸಲಾಗಿದೆ. ಬೆಳಗ್ಗೆ ೧೧.೧೦ ಕ್ಕೆ ಜಟ್ಟಿ ಕಾಳಗ ನಡೆಸಿದ್ದಾರೆ.
ಐತಿಹಾಸಿಕ ಜಟ್ಟಿ ಕಾಳಗವನ್ನು ರಾಜಮಾತೆ ಪ್ರಮೋದಾ ದೇವಿ ವೀಕ್ಷಿಸಿದ್ದಾರೆ. ಮೈಸೂರಿನ ಬಲರಾಮ ಜಟ್ಟಿ ಹಾಗೂ ನಾರಾಯಣ ಜಟ್ಟಿ ನಡುವೆ ಜಟ್ಟಿ ಕಾಳಗ ನಡೆದಿದೆ.