ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಅಕ್ಟೋಬರ್ ೨೮ರಂದು ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ನಿರ್ದೇಶಕ ಸ್ಥಾನಗಳಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕ್ಷೇತ್ರದಿಂದ ಸ್ಪರ್ಧಿಸಿರುವ ನಾಲ್ವರ ಗೆಲುವಿಗೆ ಸರ್ವರೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಸಾಮರಸ್ಯ ತಾಲೂಕು ಪ್ರಾಥಮಿಕ ಶಾಲಾಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ. ಪುರುಷೋತ್ತಮ್ ಹೇಳಿದರು.
ಪಟ್ಟಣದ ಹಾಸನ ಮೈಸೂರು ರಸ್ತೆಯಲ್ಲಿರುವ ಬಿ ಆರ್ ಸಿ ಕೇಂದ್ರದಲ್ಲಿ ಶಿಕ್ಷಕರ ಕ್ಷೇತ್ರಕ್ಕೆ ಸಮಾನ ಮನಸ್ಕರ ಪ್ರಗತಿಪರ ವೇದಿಕೆಯ ಬೆಂಬಲಿತ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ ಶಿಕ್ಷಕರಾದ ರಾಜಶೇಖರ, ,ಒಂಟಿಮನೆ ನಾಗರಾಜು,ಬಿ.ಎಲ್. ಮಹದೇವ ಮತ್ತು ಎಚ್. ಡಿ. ಪಾಂಡು ಅವರ ಪರವಾಗಿ ಮತಯಾಚಿಸಿ ಮಾತನಾಡಿದರು.
ಶಿಕ್ಷಕರ ಎಲ್ಲಾ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿ ಸಕಾಲದಲ್ಲಿ ಅವರ ನೆರವಿಗೆ ಬರಲು ನಮ್ಮ ತಂಡ ನಿರ್ಧರಿಸಿದ್ದು ಇದನ್ನು ಅರಿತು ಶಿಕ್ಷಕ ಬಾಂದವರು ನಮ್ಮ ನೆರವಿಗೆ ಬರಬೇಕೆಂದು ಕೋರಿದರು. ಎಸ್‌ಎಂಪಿವಿ ಅಧ್ಯಕ್ಷ ಸಿ.ಎನ್. ಪ್ರಭು ಮಾತನಾಡಿ ನಾವೆಲ್ಲರೂ ಒಟ್ಟಿಗೆ ಕುಳಿತು ನಮ್ಮ ತಂಡದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ನಾಳೆಯಿಂದಲೇ ಎಲ್ಲರೂ ಶಿಕ್ಷಕರ ಮನೆಬಾಗಿಲಿಗೆ ತೆರಳಿ ಮತಯಾಚಿಸಿ ಅವರ ಗೆಲುವಿಗೆ ಕಾರಣವಾಗಬೇಕೆಂದು ಮನವಿ ಮಾಡಿಕೊಂಡರು.
ಪ್ರಧಾನ ಕಾರ್ಯದರ್ಶಿ ಚಿಕ್ಕಕೊಪ್ಪಲು ಸಿ. ಎನ್. ಸ್ವಾಮಿ ಮಾತನಾಡಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಕೆ. ಎಸ್. ನಾಗರಾಜು, ಡಿ.ಟಿ. ಕುಮಾರ್, ಎಸ್. ರೇವಣ್ಣ, ರಿಜ್ವಾನ್, ಸೈಯದ್ ಖಾದಿರ್, ಹೆಚ್. ಬಿ. ರವಿಕುಮಾರ್, ಕೃಷ್ಣನಾಯಕ, ರಾಮಪ್ರಸಾದ್, ಶೀಲಾ, ನಾಗರತ್ನ ಕಮಲಮ್ಮ ಸುಮಾ, ಮಂಜುಳಾಂಬ, ಲಲಿತಾ ,ಮೋಹನ್ ಕುಮಾರ್, ಪ್ರಕಾಶ್, ನಾರಾಯಣಶೆಟ್ಟಿ, ಬಿ.ವಿ. ಪ್ರಸನ್ನ, ಮುತ್ತೇಶಾಚಾರ್, ಅನುಪಮ, ಸಿ.ಎಸ್. ಮಂಜುನಾಥ್, ರಾಮಕೃಷ್ಣ ಸೇರಿದಂತೆ ಇತರರು ಹಾಜರಿದ್ದರು.