ಗುಂಡ್ಲುಪೇಟೆ: ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯಲ್ಲಿರುವ ಶ್ರೀ ರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಆಷಾಢ ಮಾಸದ ಕೊನೆ ಶುಕ್ರವಾರದ ಪ್ರಯುಕ್ತ ಪಾರ್ವತಮ್ಮನವರ ಮೂರ್ತಿಗೆ ನಾನಾ ಬಗೆಯ ಬಳೆಗಳಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.
ಕೊನೆ ಆಷಾಢ ಶುಕ್ರವಾರದ ಹಿನ್ನಲೆ ಪಾರ್ವತಮ್ಮನವರ ಮೂರ್ತಿಗೆ ಹಾಲು, ಮೊಸರು, ಬೆಣ್ಣೆ ಸೇರಿದಂತೆ ವಿವಿಧ ಬಗೆಯ ಅಭಿಷೇಕಗಳನ್ನು ಮಾಡಿ ದೇವಸ್ಥಾನದ ಅರ್ಚಕ ಶಂಕರ ನಾರಾಯಣ ಜೋಯಿಸಿ ಮಹಾ ಮಂಗಳಾರತಿ ನೆರವೇರಿಸಿದರು.
ಈ ವೇಳೆ ಪಟ್ಟಣ ವ್ಯಾಪ್ತಿಯ ನೂರಾರು ಮಂದಿ ದೇವಸ್ಥಾನಕ್ಕೆ ಆಗಮಿಸಿ ಬಳೆಯಲ್ಲಿ ಸಿಂಗಾರಗೊಂಡ ಪಾರ್ವತಮ್ಮನ ಮೂರ್ತಿಯನ್ನು ಕಣ್ತುಂಬಿಕೊಂಡು ಪೂಜೆ ಸಲ್ಲಿಸಿದರು. ನಂತರ ದೇವಸ್ಥಾನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗವನ್ನು ಸಹ ಏರ್ಪಡಿಸಲಾಗಿತ್ತು.