ಮಂಡ್ಯ: ಇತ್ತೀಚಿಗೆ ರಾಜ್ಯದಲ್ಲಿ ದಿನಕ್ಕೊಂದು ಹಗರಣ ಬೆಳಕಿಗೆ ಬರುತ್ತಿವೆ. ಮೊದಲು ವಾಲ್ಮೀಕಿ ನಿಗಮದಲ್ಲಿ ನಡೆದ ಕೋಟ್ಯಾಂತರ ಅವ್ಯವಹಾರ ಹಗರಣ ಬೆಳಕಿಗೆ ಬಂತು. ಬಳಿಕ ಮುಡಾ ಹಗರಣ ಬೆಳಕಿಗೆ ಬಂತು. ಇದೀಗ ಮಂಡ್ಯ ಜಿಲ್ಲೆಯಲ್ಲಿ ಸಹಕಾರ ಸಂಘದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಕುರಿತಂತೆ ಮೇಲುಕೋಟೆಯ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಗಂಭೀರವಾದಂತಹ ಆರೋಪ ಮಾಡಿದ್ದು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದೆ. ಎಂದು ಅವರು ಗಂಭೀರವಾಗಿ ಆರೋಪಿಸಿದರು.
ಈ ಕುರಿತಂತೆ ದರ್ಶನ್ ಪುಟ್ಟಣ್ಣಯ್ಯ ಅವರು, ಸಹಕಾರ ಸಂಘದಲ್ಲಿ ಕೋಟ್ಯಾಂತರ ರೂಪಾಯಿ ಹಣ ದುರ್ಬಳಕೆ ಆಗಿರುವುದು ನಿಜ ಆದರೆ ಈ ಕುರಿತು ಯಾವುದೇ ದೂರು ಬಂದಿಲ್ಲ.ಮುಂದಿನ ದಿನಗಳಲ್ಲಿ ಈ ಬಗ್ಗೆ ದೂರು ನೀಡುತ್ತೇವೆ. ಸದ್ಯ ರೈತರ ಹಣ ಮೊದಲು ರಿಕವರಿ ಆಗಬೇಕು. ಏಕೆಂದರೆ ರೈತರು ಇಲ್ಲಿ ಕೇವಲ ತಮ್ಮ ಹಣವನ್ನು ಅಷ್ಟೇ ಅಲ್ಲದೆ ಆಭರಣಗಳನ್ನು ಕೂಡ ಇಟ್ಟಿದ್ದಾರೆ ಹಾಗಾಗಿ ಈ ಕುರಿತಂತೆ ರೈತರು ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.