ಕೆ.ಆರ್.ಪೇಟೆ : ತಾಲ್ಲೋಕಿನ ಬೀರುವಳ್ಳಿ ಕೃಷಿ ಪತ್ತಿನ ಸಹಾಕಾರ ಸಂಘದ ನೂತನ ಅಧ್ಯಕ್ಷರಾಗಿ ಲಕ್ಷ್ಮಣಗೌಡ(ಕುಮಾರ್)ರವರು ಅವಿರೋದವಾಗಿ ಆಯ್ಕೆಯಾಗಿದ್ದಾರೆ ಹಿಂದಿನ ಅಧ್ಯಕ್ಷರಾದ ಬೀಕನಹಳ್ಳಿ ಈರೇಗೌಡರವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಇಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಬಯಸಿ ಲಕ್ಷ್ಮಣಗೌಡ ಹೊರತುಪಡಿಸಿ ಉಳಿದ ಯಾವ ಸದಸ್ಯರು ಕೂಡ ಸದಸ್ಯರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರಾಗಿ ಲಕ್ಷ್ಮಣಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದರು.ನೂತನ ಅಧ್ಯಕ್ಷ ಲಕ್ಷ್ಮಣಗೌಡರವರನ್ನು ಅಭಿನಂದಿಸಿ ಮಾತನಾಡಿದ ಗ್ರಾ.ಪಂ.ಸದಸ್ಯ ಸಾಕ್ಷಿಬೀಡು ಮಂಜೇಗೌಡ ಸಹಕಾರ ತತ್ವದ ಉದ್ದೇಶಗಳನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು.ಸಹಕಾರ ಸಂಘದಲ್ಲಿ ಯಾರೂ ಸಹ ತಾವು ಯಾವುದೇ ವೈಯಕ್ತಿಕ ಲಾಭ ಪಡೆಯಲು ಪ್ರಯತ್ನಿಸಿದೆ.ಸೇವಾ ಭಾವನೆಯಿಂದ ಕೆಲಸ ಮಾಡುವುದರಿಂದ ಇದರ ಪ್ರತಿಫಲವು ನೇರವಾಗಿ ರೈತರಿಗೆ ತಲುಪುತ್ತದೆ ಆದ್ದರಿಂದ ಸಹಕಾರ ಸಂಘಗಳಲ್ಲಿ ರಾಜಕೀಯ ಹಸ್ತಕ್ಷೇಪ ಮಾಡದಂತೆ ಅವುಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು ಬಳಿಕ ಮಾತನಾಡಿದ ನೂತನ ಅಧ್ಯಕ್ಷ ಲಕ್ಷ್ಮಣಗೌಡ ಸಂಘದ ಸದಸ್ಯರು, ಗ್ರಾಮದ ಮುಖಂಡರು ನನ್ನ ಮೇಲೆ ವಿಶ್ವಾಸ ಇರಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ.ಆ ವಿಶ್ವಾಸಕ್ಕೆ ಕಪ್ಪುಚುಕ್ಕೆ ಬಾರದಂತೆ ಹಿರಿಯರ ಮಾರ್ಗದರ್ಶನದಲ್ಲಿ ಬದ್ದನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಸಂಘದ ಸದಸ್ಯರಿಗೆ,ರೈತರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆಂದು ಭರವಸೆ ನೀಡಿದರು ತಾಲೂಕು ಜೆಡಿಎಸ್ ಅಧ್ಯಕ್ಷ ಎ ಎನ್ ಜಾನಕಿರಾಮ್ ಜೆಡಿಎಸ್ ಮುಖಂಡ ಎಚ್ ಟಿ ಲೋಕೇಶ್.ನಿಕಟಪೂರ್ವ ಅಧ್ಯಕ್ಷ ಬೀಕನಹಳ್ಳಿ ಈರೇಗೌಡ ಮತ್ತು ನಿರ್ದೇಶಕರು,ಮುಖಂಡರು ನೂತನ ಅಧ್ಯಕ್ಷರಾದ ಲಕ್ಷ್ಮಣಗೌಡರನ್ನು ಅಭಿನಂದಿಸಿದರು.ಈ ಸಂದರ್ಭದಲ್ಲಿ ಗ್ರಾ ಪಂ ಸದಸ್ಯ ಸಾಕ್ಷಿಬಿಡು ಮಂಜೇಗೌಡ.ಅಕ್ಕಿಹೆಬ್ಬಾಳು ಹೋಬಳಿ ಅಧ್ಯಕ್ಷ ಬಸವಲಿಂಗಪ್ಪ.ತಾ. ಪಂ.ಮಾಜಿ ಅಧ್ಯಕ್ಷ ಬಿ.ಆರ್.ಕೃಷ್ಣ.ಜೆ ಡಿ ಎಸ್ ಉಪಾಧ್ಯಕ್ಷ ಪುಟ್ಟಸ್ವಾಮಿಗೌಡ.ತಾ. ಪಂ. ಮಾಜಿ ಅಧ್ಯಕ್ಷ ಪ್ರಭುದೇವೇಗೌಡ.ಸಂಘದ ಉಪಾಧ್ಯಕ್ಷೆ ಲಕ್ಷ್ಮಮ್ಮ.ನಿರ್ದೇಶಕರಾದ ಬೀಕನಹಳ್ಳಿ ಈರೇಗೌಡ ಬಿ.ಕೆ ಹರೀಶ್.ನಂಜೇಗೌಡ.ಶೀಲಾಮಣಿ. ಲಕ್ಷ್ಮಮ್ಮಾ.ಕಮಲಮ್ಮ.ಪಾರ್ವತಮ್ಮ.ಜಯರಾಮೇಗೌಡ.ಚಂದ್ರಪ್ಪ.ಸಾಕ್ಷಿಬಿಡು ಅಶೋಕ್.ನಂಜುಂಡಪ್ಪ ದಿನೇಶ್ ಮಂದಗೆರೆ ರಮೇಶ್.ನಾಟನಹಳ್ಳಿ ಅಶ್ವಥ್.ಜೈ ಪ್ರಕಾಶ್.ಬಿ.ಎನ್.ಮೋಹನ್.ಸಂಘದ ಕಾರ್ಯನಿರ್ವಾಹಣಾಧಿಕಾರಿ ಸತೀಶ್ ಸೇರಿದಂತೆ ಉಪಸ್ಥಿತರಿದ್ದರು.