ಚಾಮರಾಜನಗರ : ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ಫೀರ್ ಸಮಿತಿಯವರು ಭೇಟಿ ನೀಡಿ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿದರು.೨೦೧೭ ರಿಂದ ೨೦೨೨ ರವರೆಗಿನ ಕಾಲೇಜಿನ ಶಿಕ್ಷಣದ ಪ್ರಗತಿಯನ್ನು ಪರಿಶೀಲಿಸಿದರು.ಅಲ್ಲದೆ ಕಾಲೇಜಿನ ಮೂಲಭೂತ ಸೌಕರ್ಯಗಳಾದ ಕಂಪ್ಯೂಟರ್ ಕೊಠಡಿ ಹಾಗೂ ಲ್ಯಾಬ್ ಗಳನ್ನು ವೀಕ್ಷಿಸಿ ಪರಿಶೀಲಿಸಿದರು. ಈಗಾಗಲೇ ಕಾಲೇಜಿನಿಂದ ಕಾಲೇಜಿನ ಎಸ್‌ಎಸ್‌ಆರ್ ವರದಿ ಸಲ್ಲಿಸಲಾಗಿದ್ದು,ಈ ಆಧಾರದ ಮೇಲೆ ನ್ಯಾಕ್ ಫೀರ್ ಸಮಿತಿಯು ಇಂದು ನಮ್ಮ ಕಾಲೇಜಿಗೆ ಭೇಟಿ ನೀಡಿ ಕಾಲೇಜಿನ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರು. ಅಲ್ಲದೆ ಶೈಕ್ಷಣಿಕ ಪ್ರಗತಿ ಬಗ್ಗೆ ಪರಿಶೀಲಿಸಿ ವರದಿಯನ್ನ ಸಲ್ಲಿಸಲಿದೆ ನಂತರ ಕಾಲೇಜಿನ ಎಸ್‌ಎಸ್‌ಆರ್ ವರದಿ ಹಾಗೂ ನ್ಯಾಕ್ ಫೀರ್ ಸಮಿತಿ ವರದಿಯ ಆಧಾರದ ಮೇಲೆ ಕಾಲೇಜಿಗೆ ಗ್ರೇಡ್ ನೀಡಲಿದೆ.ಕಾಲೇಜಿಗೆ ಆಗಮಿಸಿದ್ದ ನ್ಯಾಕ್ ಫೀರ್ ಸಮಿತಿಯ ಅಧಿಕಾರಿಗಳಿಗೆ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರುಅಧ್ಯಾಪಕ ವೃಂದ ಅಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ಸೂಕ್ತ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲೆ ಎಂ ಆರ್ ಸುಮತಿ, ಉಪನ್ಯಾಸಕರಾದ ಜಯಣ್ಣ,ನಿರಂಜನ್ ,ಪುಷ್ಪಕುಮಾರ್ ಇದ್ದರು.