Saturday, April 19, 2025
Google search engine

Homeರಾಜ್ಯಸುದ್ದಿಜಾಲವಿದ್ಯಾರ್ಥಿಗಳು ಕಲಿಕೆಯಲ್ಲಿ ಉತ್ತುಂಗಕ್ಕೇರಿ, ಬಲಿಷ್ಠ ಭಾರತದ ನಿರ್ಮಾಣಕ್ಕೆ ಕೈಜೋಡಿಸಿ: ಶಾಸಕ ಡಿ.ರವಿಶಂಕರ್

ವಿದ್ಯಾರ್ಥಿಗಳು ಕಲಿಕೆಯಲ್ಲಿ ಉತ್ತುಂಗಕ್ಕೇರಿ, ಬಲಿಷ್ಠ ಭಾರತದ ನಿರ್ಮಾಣಕ್ಕೆ ಕೈಜೋಡಿಸಿ: ಶಾಸಕ ಡಿ.ರವಿಶಂಕರ್

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಕಲಿಕೆಯ ಅವಧಿಯಲ್ಲಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಮತ್ತು ಎಚ್ಚರಿಕೆಯಿಂದ ಅಭ್ಯಾಸ ಮಾಡಿ ಯಶಸ್ಸಿನತ್ತ ಮುನ್ನಡೆಯಬೇಕೆಂದು ಶಾಸಕ ಡಿ.ರವಿಶಂಕರ್ ತಿಳಿಸಿದರು.

ಕೆ.ಆರ್.ನಗರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾವೇರಿ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆದ ೨೦೨೪-೨೫ ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ಎನ್ ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಯುವ ರೆಡ್ ಕ್ರಾಸ್ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಕಲಿಕೆಯಲ್ಲಿ ಉತ್ತುಂಗಕ್ಕೇರಿ ವೈಯಕ್ತಿಕ ಬದುಕು ರೂಪಿಸಿಕೊಳ್ಳುವುದರ ಜತೆಗೆ ಸಮಾಜ ಮತ್ತು ದೇಶದ ಏಳಿಗೆಗೆ ಅಪಾರ ಕೊಡುಗೆ ನೀಡಿ ಬಲಿಷ್ಠ ಭಾರತದ ನಿರ್ಮಾಣಕ್ಕೆ ಕೈಜೋಡಿಸಿ ಇತರರಿಗೆ ಮಾದರಿಯಾಗಬೇಕೆಂದು ಕಿವಿಮಾತು ಹೇಳಿದರು.

ಪ್ರತಿಯೊಬ್ಬರು ಗುರುವಿನ ಮಾರ್ಗದರ್ಶನ ಪಡೆದು ಸ್ಪಷ್ಠವಾದ ಗುರಿಯೊಂದಿಗೆ ಅದನ್ನು ತಲುಪಲು ದೃಡ ಸಂಕಲ್ಪ ಮಾಡಿಕೊಂಡು ಮುನ್ನೆಡೆದರೆ ಉತ್ತಮ ಸಾಧನೆ ಮಾಡಲು ಸಾಧ್ಯವಾಗಲಿದ್ದು ಇದನ್ನು ಅರಿತು ಮುನ್ನಡೆಯಿರಿ ಎಂದು ಸಲಹೆ ನೀಡಿದರು.
ಎತ್ತರದ ಸ್ಥಾನಕ್ಕೆ ತಲುಪಲು ದೊಡ್ಡ ಕನಸು ಕಂಡು ಅದನ್ನು ನನಸಾಗಿಸಿಕೊಳ್ಳಲು ನಿಗದಿತ ಯೋಜನೆ ಹಾಕಿಕೊಂಡು ಏಕಾಗೃತೆಯಿಂದ ನಡೆದರೆ ಬದುಕು ಹಸನಾಗಲಿದ್ದು ಆಟ ತುಂಟಾಟದೊoದಿಗೆ ಶೈಕ್ಷಣಿಕ ಪ್ರಗತಿ ಸಾದಿಸಿ ಎಂದು ಮಾರ್ಗದರ್ಶನ ಮಾಡಿದರು.

ಆಧುನಿಕ ಪ್ರಪಂಚದಲ್ಲಿ ಜಗತ್ತು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು ನಾವು ಅದಕ್ಕೆ ತಕ್ಕನಾಗಿ ಸಮಯಾವಕಾಶ ಹೊಂದಿಸಿಕೊoಡು ಎಲ್ಲಾ ಅವಕಾಶಗಳ ಸದ್ಬಳಕೆಯೊಂದಿಗೆ ಜ್ಞಾನವನ್ನು ವೃದ್ದಿಸಿಕೊಂಡು ಸಾಧನೆಯ ಶಿಖರ
ಏರಬೇಕೆಂದರು. ಕಾಲೇಜಿನ ಹಳೆಯ ಕಟ್ಟಡ ಕೆಡವಿ ಹೊಸದಾಗಿ ನಿರ್ಮಾಣ ಮಾಡುವುದರೊಂದಿಗೆ ಕ್ಯಾಂಟೀನ್ ಅರಂಬಿಸಿ ಸಂಪರ್ಕ ರಸ್ತೆಯನ್ನು ದುರಸ್ತಿ ಮಾಡಿಸಿಕೊಡುವುದಾಗಿ ಭರವಸೆ ನೀಡಿದ ಶಾಸಕರು ನಮ್ಮ ಆಸಕ್ತಿಗೆ ತಕ್ಕಂತೆ ನಡೆದುಕೊಂಡು ಪೋಷಕರ ಆಸೆ ಪೊರೈಸಬೇಕೆಂದರು.

ಮೈಸೂರು ಮಹಾರಾಣಿ ಕಲಾ ಕಾಲೇಜಿನ ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕಿ ಡಾ.ಬಿ.ವಿ.ಸುಧಾಮಣಿ
ಮಾತನಾಡಿ ವಿದ್ಯಾರ್ಥಿಗಳು ಓದಿನೊಂದಿಗೆ ಕ್ರೀಡೆ ಮತ್ತು ಇತರ ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ನೈಪುಣ್ಯತೆಗಳಿಸಿ ಅದನ್ನು ಭವಿಷ್ಯ ರೂಪಿಸಿಕೊಳ್ಳುವ ಏಣಿ ಮಾಡಿಕೊಳ್ಳಬೇಕೆಂದರು. ಪ್ರಾಂಶುಪಾಲ ಡಾ.ಬಿ.ಎಸ್.ಜಯ ಮಾತನಾಡಿದರು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹೆಚ್.ಪಿ.ಪ್ರಶಾಂತ್, ಸದಸ್ಯರಾದ ನಟರಾಜು, ರಾಜಯ್ಯ, ಹೆಚ್.ಎಸ್.ವೇಣುಗೋಪಾಲ್, ಬೆಟ್ಟನಾಯಕ, ತಿಮ್ಮಯ್ಯ, ಕೆ.ಎಲ್.ರಾಜೇಶ್, ಎಸ್.ಪ್ರಸಾದ್, ಜಯರಾಮೇಗೌಡ, ಕೆ.ಎಸ್.ಶಂಕರ್, ಜಿ.ಆರ್.ರಾಮೇಗೌಡ, ಸಾಂಸ್ಕೃತಿಕ ಸಮಿತಿಯ ಸಂಚಾಲಕ ಪ್ರೊ.ದೀಕ್ಷಿತ್, ಐಕ್ಯೂಎಸಿ ಘಟಕ ಸಂಚಾಲಕ ಡಾ.ಜಿ.ಬಿ.ತಿಪ್ಪೇಸ್ವಾಮಿ ಮತ್ತು ಪತ್ರಾಂಕಿತ ವ್ಯವಸ್ಥಾಪಕ ಎಂ.ರಘು, ತಾಲೂಕು ಕಾಂಗ್ರೆಸ್ ವಕ್ತಾರ ಸೈಯದ್ ಜಾಬೀರ್ ಮತ್ತಿತರರು ಇದ್ದರು.

ಶಿಕ್ಷಣ ಸಂಸ್ಥೆಗಳು, ಶಾಲಾ ಮತ್ತು ಕಾಲೇಜುಗಳಿಗೆ ಭವ್ಯವಾದ ಕಟ್ಟಡಗಳು ಮುಖ್ಯವಲ್ಲ ಅದರ ಜತೆಗೆ ಮೌಲ್ಯಯುತ ಹಾಗೂ ಗುಣಮಟ್ಟದ ಶಿಕ್ಷಣ ಕಲಿಸುವ ಶಿಕ್ಷಕರ ಜತೆಗೆಬೋಧಕ ವೃಂದವೂ ಅತ್ಯಂತ ಪ್ರಮುಖ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾವೇರಿ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆದ ೨೦೨೪-೨೫ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ಎನ್ ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಯುವ ರೆಡ್ ಕ್ರಾಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ
ಮಾತನಾಡಿದರು.

ವಿದ್ಯಾರ್ಥಿಗಳಿಗೆ ಬೋಧನೆ ಮಾಡುವಾಗ ಉಪನ್ಯಾಸಕರು ಪಠ್ಯದ ಜತೆಗೆ ಪಠ್ಯೇತರ ಮತ್ತು ಸಾಮಾನ್ಯ ಜ್ಞಾನದ ಬಗ್ಗೆಯೂ ಕಲಿಸಿ ಅವರನ್ನು ಸರ್ವ ಸಂಪನ್ನರಾಗಿ ಮಾಡುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು
ಮಾರ್ಗದರ್ಶಕರಾಗಬೇಕೆಂದು ಸಲಹೆ ನೀಡಿದರು. ಇತಿಹಾಸದ ಉಪನ್ಯಾಸಕರು ಪಾಠದೊಂದಿಗೆ ರಾಜರ ಇತಿಹಾಸ ಮತ್ತು ಅವರ ಆಳ್ವಿಕೆ ಬಗ್ಗೆ ಮನನ ಮಾಡಿಸಿ ಭವ್ಯ ಭಾರತದ ಪ್ರಜೆಗಳಾದ ವಿದ್ಯಾರ್ಥಿಗಳಲ್ಲಿ ಇತಿಹಾಸ ಪ್ರಜ್ಞೆ ಮೂಡಿಸಿ ಅವರು ಸರ್ವಾಂತರ್ಯಾಮಿಯಾಗುವoತೆ ಮಾಡಬೇಕೆಂದು ಸಲಹೆ ನೀಡಿದರು.

ರಾಜ್ಯಶಾಸ್ತ್ರ ಉಪನ್ಯಾಸಕರು ಕೂಡ ರಾಜಕೀಯ ನೀತಿ ಮತ್ತು ರಾಜಕಾರಣದಿಂದ ಜನರಿಗಾಗುವ ಅನುಕೂಲ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ತಿಳಿಸಿ ಕಲಿಯುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ರಾಜ್ಯ ಮತ್ತು ರಾಷ್ಠ್ರ ಮಟ್ಟದ ನಾಯಕರಾಗುವ ಕನಸನ್ನು ಬಿತ್ತಬೇಕೆಂದು ನುಡಿದರು.

RELATED ARTICLES
- Advertisment -
Google search engine

Most Popular