Saturday, April 19, 2025
Google search engine

Homeರಾಜ್ಯಸುದ್ದಿಜಾಲಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ- ಶಾಸಕ ಜಿ.ಡಿ ಹರೀಶ್ ಗೌಡ

ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ- ಶಾಸಕ ಜಿ.ಡಿ ಹರೀಶ್ ಗೌಡ

ಹುಣಸೂರು ಅ.17: ನಗರದ ಸಮಗ್ರ ಅಭಿವೃದ್ಧಿ ನನಗೆ ಮುಖ್ಯವಾಗಿದ್ದು. ಅನುದಾನದಲ್ಲಿ ನಾನೆಂದೂ ರಾಜಕೀಯ ಮಾಡಲ್ಲವೆಂದು ಶಾಸಕ ಜಿ.ಡಿ ಹರೀಶ್ ಗೌಡ ತಿಳಿಸಿದರು.

ನಗರದ ಹೊಸಮಾರುತಿ ಬಡಾವಣೆಯಲ್ಲಿ 2024-25 ನೇ ಸಾಲಿನ 15ನೇ ಹಣಕಾಸು ಯೋಜನೆಯ ಹಾಗೂ ಎಸ್ ಎಫ್ ಸಿ ಯೋಜನೆಯಡಿ ಒಟ್ಟು 144.30 ಲಕ್ಚಗಳ ಕಾಮಗಾರಿ ಹಾಗೂ ಕಾವೇರಿ ನೀರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನನಗೆ ಪಕ್ಷ ಬೇಧವಿಲ್ಲ 31 ನಗರಸಭೆ ಸದಸ್ಯರು ಒಂದೆಯಾಗಿದ್ದು ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ ಎಂದರು.

ನಗರದ ಸಮಗ್ರ ಅಭಿವೃದ್ಧಿ ನಗರದೆಲ್ಲಡೆ ಯುಜಿಡಿ, ಡ್ರೈನೇಜ್, ರಸ್ತೆ ಸೇರಿದಂತೆ ಸುಮಾರು 78 ಕೋಟಿ ಹಣದ ಅವಶ್ಯಕತೆ ಇದೆ. ಆದರೆ ಇಂದಿನ ಸರಕಾರದಲ್ಲಿ ಗ್ಯಾರಂಟಿ ಯೋಜನೆಗೆ ವರ್ಷಕ್ಕೆ 55 ಸಾವಿರ ಕೋಟಿ ಹಣದ ಅವಶ್ಯಕತೆ ಇರುವುದರಿಂದ ಈ ಸರಕಾರದಲ್ಲಿ ಅಭಿವೃದ್ಧಿ ಕಾಣುತ್ತಿಲ್ಲ ಎಂದರು.

ಅನಧಿಕೃತ ಬಡಾವಣೆ ಅಧಿಕೃತ ಬಡಾವಣೆ ಆಗಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಮೊದಲ ಬಾರಿಗೆ ನೀವು ಶಾಸಕನಾಗಿ ಆಯ್ಕೆ ಮಾಡಿದ ಕೂಡಲೇ. ವಿಧಾನ ಸಭೆಯಲ್ಲಿ ಚೆರ್ಚಿಸಿದ್ದೇನೆ ಇದು ನಮ್ನೂರಿನ ಸಮಸ್ಯ ಮಾತ್ರವಲ್ಲ ಇದು ರಾಜ್ಯದ ಸಮಸ್ಯೆಯಾಗಿದ್ದು ಇದಕ್ಜೆ ಸುಮಾರು ನೂರು ಶಾಸಕರು ಬೆಂಬಲ ಸೂಚಿಸಿದ್ದಾರೆ. ಈಗಾಲೇ ಸರಕಾರದ ಮಟ್ಟದಲ್ಲಿದ್ದು ಸದ್ಯದಲ್ಲೆ ನಮೋನೆ 3 ಬಗ್ಗೆ ಹರಿಯಲಿದೆ ಎಂದರು.

27 ನೇ ವಾರ್ಡಿನಲ್ಲಿ ಇನ್ನುಳಿದ ಮೂಲ ಸೌಕರ್ಯ ಮತ್ತು ಇಲ್ಲಿ ಹಿಂದುಳಿದ ವರ್ಗದವರು ಹೆಚ್ಚು ಇರುವ ಕಾರಣ. ಸಮುದಾಯ ಭನವನ್ನು ನಿರ್ಮಿಸಲು ಶ್ರಮಿಸುವೆ. ಹಾಗೆ ನಮ್ಮ ತಂದೆ ಜಿ.ಟಿ.ದೇವೇಗೌಡರು ನಿರ್ಮಿಸಿದ್ದ ಅಶ್ವತ್ಥ ಕಟ್ಟೆ ಶಿಥಿಲವಾಗಿದ್ದು,ನನ್ನ ಸ್ವಂತ ಖರ್ಚಿನಲ್ಲಿ ಕಾಯಕಲ್ಪ ಮಾಡಿಕೊಡುವೆ ಎಂದರು.

ನಗರಸಭೆ ಅಧ್ಯಕ್ಷ ಶರವಣ ಮಾತನಾಡಿ, ನಗರಾಭಿವೃದ್ಧಿ 15 ವರುಷಗಳಿಂದ ಆಗದ ಕೆಲಸವನ್ನು ಒಂದು‌ ವರ್ಷದಲ್ಲಿ ಮಾಡಿಸುವ ಪ್ರಯತ್ನವಾಗಿದೆ. ಶಾಸಕ ಜಿ.ಡಿ.ಹರೀಶ್ ಗೌಡ ಎಲ್ಲ ನಗರಸಭೆ ಸದಸ್ಯರಿಗೂ ಆದ್ಯತೆ ನೀಡಿ ಅಭಿವೃದ್ಧಿಗೆ ಮುಂದಾಗಿದ್ದಾರೆ

ಕಾರ್ಯಕ್ರಮದಲ್ಲಿ, ನಗರಸಭೆ ಉಪಾಧ್ಯಕ್ಷೆ ಆಶಾ ಕೃಷ್ಣ ನಾಯ್ಕ, ನಗರಸಭೆ ಸದಸ್ಯರಾದ ರಾಧ, ಸತೀಶ್ ಕುಮಾರ್, ಕೃಷ್ಣ ಗುಪ್ತ, ಗಣೇಶ್ ಕುಮಾರಸ್ವಾಮಿ, ಶ್ರೀ ನಾಥ್, ದೇವರಾಜ್, ಸಿರಾಜ್, ಮಲ್ಲಿಕ್ ಪಾಷ, ರಾಣಿ ಪೆರಿಮಳ್, ನಗರ ಪೌರಾಯುಕ್ತೆ ಮಾನಸ, ಇಂಜಿನಿಯರ್ ಗಳಾದ ಶರ್ಮಿಳಾ, ಸಮಂತ್, ಕಾರ್ಯಕ್ರಮ ನೇತೃತ್ವ ವಹಿಸಿದ್ದ, ಶಶಿಕಲಾ ಬಸವಲಿಂಗಯ್ಯ, ದಲಿತ ಮುಖಂಡ ಬಸವಲಿಂಗಯ್ಯ, ಕಿರಂಗೂರು ಬಸವರಾಜ್, ಅಮ್ಮರ್ ಅಬ್ದುಲ್ ಇದ್ದರು.

RELATED ARTICLES
- Advertisment -
Google search engine

Most Popular