Wednesday, April 23, 2025
Google search engine

Homeಅಪರಾಧಕಾನೂನುಇಶಾ ಫೌಂಡೇಶನ್ ವಿರುದ್ಧದ ಎಲ್ಲಾ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್

ಇಶಾ ಫೌಂಡೇಶನ್ ವಿರುದ್ಧದ ಎಲ್ಲಾ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್

ದೆಹಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವನ್ ಅವರ ಇಶಾ ಫೌಂಡೇಶನ್ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಸುಪ್ರೀಂಕೋರ್ಟ್ ಇಂದು ಶುಕ್ರವಾರ ವಜಾಗೊಳಿಸಿದೆ.

ಆಶ್ರಮವನ್ನು ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಸದ್ಗುರು ಜಗ್ಗಿ ವಾಸುದೇವನ್ ಅವರು ‘ಬ್ರೈನ್ ವಾಶ್’ ಮಾಡಲಾಗಿದ್ದಾರೆ ಎಂದು ವ್ಯಕ್ತಿಯೊಬ್ಬರು ಇಶಾ ಫೌಂಡೇಶನ್ ವಿರುದ್ಧ ಆರೋಪಿಸಿದ್ದರು. ಇದೀಗ ಈ ಪ್ಕರಣದ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು, ಗೀತಾ ಮತ್ತು ಲತಾ ಇಬ್ಬರೂ ವಯಸ್ಕರಾಗಿದ್ದು, ಅವರ ಸ್ವಂತ ಇಚ್ಛೆಯ ಆಶ್ರಮದಲ್ಲಿ ವಾಸಿಸುತ್ತಿರುವ ಕಾರಣ ಕಾನೂನುಬಾಹಿರ ಬಂಧನದ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ತಿಳಿಸಿದೆ.

ಆದಾಗ್ಯೂ, ಆದೇಶವು ಈ ಪ್ರಕರಣಕ್ಕೆ ಮಾತ್ರ. ಆಶ್ರಮದಲ್ಲಿ ವೈದ್ಯರೊಬ್ಬರ ಮೇಲೆ ಇತ್ತೀಚೆಗೆ ಮಕ್ಕಳ ಮೇಲಿನ ದೌರ್ಜನ್ಯದ ಆರೋಪವಿದೆ ಎಂದು ನ್ಯಾಯಾಲಯ ಹೇಳಿದೆ. ಬ್ರೈನ್ ವಾಶ್ ವಿಷಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯ ತನಿಖೆಗೆ ಆದೇಶಿಸಿದ ಮದ್ರಾಸ್ ಹೈಕೋರ್ಟ್, ಆಶ್ರಮದ ಮೇಲೆ ದಾಳಿ ನಡೆಸಿದ ನಂತರ, ‘ಸಂಪೂರ್ಣವಾಗಿ ಅನುಚಿತ’ ರೀತಿಯಲ್ಲಿ ವರ್ತಿಸಿದೆ ಎದು ತಿಳಿಸಿದೆ.

ಆಶ್ರಮಕ್ಕೆ ಸೇರಿದಾಗ ಅವರಿಬ್ಬರಿಗೂ ೨೭ ಮತ್ತು ೨೪ ವರ್ಷ. ಹೆಣ್ಣುಮಕ್ಕಳಿಬ್ಬರೂ ಅಪ್ರಾಪ್ತ ವಯಸ್ಸಿನವರಾಗಿರಲಿಲ್ಲ. ಅವರು ಹೈಕೋರ್ಟಿಗೆ ಹಾಜರಾಗುವ ಮೂಲಕ ಹೇಬಿಯಸ್ ಕಾರ್ಪಸ್ ಅರ್ಜಿಯ ಉದ್ದೇಶವನ್ನು ಪೂರೈಸಲಾಗಿದೆ. ಮುಂದೆ ಯಾವುದೇ ನಿರ್ದೇಶನಗಳ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.

RELATED ARTICLES
- Advertisment -
Google search engine

Most Popular