ಮಂಗಳೂರು (ದಕ್ಷಿಣ ಕನ್ನಡ ) : ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ವಿಧಾನಪರಿಷತ್ ಉಪಚುನಾವಣೆಗೆ ಮತಗಟ್ಟೆಗಳಿಗೆ ಮತಪತ್ರ ಮತ್ತು ಸಿಬ್ಬಂಧಿಗಳನ್ನು ಕಳುಹಿಸಿಕೊಡುವ ಮಸ್ಟರಿಂಗ್ ಕಾರ್ಯ ಭಾನುವಾರ ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಿತು.
ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಚುನಾವಣೆ cಗೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರೀಶೀಲಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.