- ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಮಾಜದಲ್ಲಿ ಜನ ಸಾಮಾನ್ಯರ ಜೊತೆ ನಾವುಗಳು ಹೇಗೆ ನಡೆದು ಕೊಳ್ಳುತ್ತೇವೆ, ಹಾಗೂ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡುವ ಕೆಲಸ, ನಡೆ,ನುಡಿ ನೋಡಿ ಜನರು ಸತ್ತಾಗ ನಾಲ್ಕು ಒಳ್ಳೆಯ ಮಾತನಾಡುತ್ತಾರೆ ಆವಾಗ ನಮ್ಮ ಬದುಕಿನ ಜೀವನವೇ ಸಾರ್ಥಕತೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು. ಅವರು ಪಟ್ಟಣದ ಎಂ.ಡಿ.ಸಿ.ಸಿ.ಬ್ಯಾಂಕ್ ಕಚೇರಿಯಲ್ಲಿ ತಾಲೂಕು ಕೃಷಿ ಪತ್ತಿನ ಸಹಕಾರಗಳ ಮುಖ್ಯ ಕಾರ್ಯನಿರ್ವಾಹಕ ಸಂಘದಿಂದ ಹಮ್ಮಿಕೊಂಡಿದ್ದ ಇತ್ತೀಚೆಗೆ ನಿಧನರಾದ ಹೊಸ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕರ (ಸಿಇಓ) ಎಸ್.ರವಿ ಅವರ ಭಾವಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ರೈತಾಪಿ ವರ್ಗದರ ಜೊತೆಯಲ್ಲಿ ಯಾವ ರೀತಿಯಲ್ಲಿ ವಿಶ್ವಾಸ, ಪ್ರೀತಿಗಳಿಸಿದ್ದರು ಮತ್ತು ಕಾರ್ಯ ನಿರ್ವಹಿಸುವ ಸಹಕಾರ ಸಂಘದ ಆಡಳಿತ ಮಂಡಳಿ ಹಾಗೂ ರೈತರ ಜೊತೆ ಉತ್ತಮ ಬಾಂಧವ್ಯ ಹೊಂದಿದ ವ್ಯಕ್ತಿಯಾಗಿದ್ದರು ಎಸ್.ರವಿ ಅವರು ಎಂದರು..
ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಾರ್ಯ ನಿರ್ವಹಿಸುತ್ತಿರವ ಸಿಇಓಗಳ ಮಾಹಿತಿ ಕೊಡಿ ಅವರಿಗೆಲ್ಲ ಗ್ರೂಪ್ ವಿಮೆ ಮಾಡಿಸಿ ಕೊಡುತ್ತೇನೆ, ಸಹಕಾರ ಸಂಘಗಳು ಮುಖ್ಯ ಕಾರ್ಯ ನಿರ್ವಾಹಕರು ಯಾರು ಕೂಡ ಆರ್ಥಿಕವಾಗಿ ಸದೃಢರಾಗಿಲ್ಲ, ಇವರನ್ನೆ ನಂಬಿದ ಕುಟುಂಬ ಆರ್ಥಿಕ ನೆರವು ಇಲ್ಲದೆ ಸಂಕಷ್ಟದಲ್ಲಿದ್ದಾರೆ.
ಬಹಳಷ್ಟು ಸಿಇಓಗಳಿಗೆ ಕಾರ್ಯ ಒತ್ತಡ ಇದ್ದೇ ಇರುತ್ತೆ, ಆದ್ದರಿಂದ ಬೆಳಗ್ಗೆ ಯೋಗಾಭ್ಯಾಸ ಮಾಡಿ ದೇಹವನ್ನು ಸದೃಢವಾಗಿ ಇಟ್ಟು ಕೊಂಡು ಉತ್ತಮ ಆರೋಗ್ಯ ಕಾಪಾಡಿ ಕೊಳ್ಳಿ ಎಂದು ಸಲಹೆ ನೀಡಿದ ಅವರು ಚಿಕ್ಮ ಮಕ್ಕಳಿಂದ ಹಿಡಿದು ವೃದ್ದರ ವರೆಗೆ ಬಹಳಷ್ಟು ಒತ್ತಡದಲ್ಲಿದ್ದೇವೆ, ೪೦ ರಿಂದ ೫೦ ಒಳಗಿನವರು ಹೃದಯ ಸಂಬಂಧಿ, ಖಾಯಿಲೆಯಿಂದ ಮರಣ ಹೊಂದುತ್ತಿದ್ದಾರೆ ಆದ್ದರಿಂದ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿ ಎಂದು ನೆರದಿದ್ದ ಸಹಕಾರ ಸಂಘಗಳ ಸಿಇಓಗಳಿಗೆ ತಿಳಿಸಿದರು.
ಹೊಸ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯವರಿಗೆ ಮನವಿ ಮಾಡುತ್ತೇನೆ ಮರಣ ಹೊಂದಿದ ಸಿಇಓ ಎಸ್.ರವಿ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡಿ ನಿಮ್ಮ ಮುಖ್ಯ ಕಾರ್ಯನಿರ್ವಾಹಕರ ಸಂಘದವರು ಬೆನ್ನೆಲುಬಾಗಿ ನಿಲ್ಲಿ ಎಂದರು.
ಬಳಿಕ ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್ ಮಾತನಾಡಿ ಮುಖ್ಯ ಕಾರ್ಯನಿರ್ವಾಹಕ ಎಸ್.ರವಿ ಅವರು ರೈತರ ಜೊತೆಗೂಡಿ ಪ್ರಾಮಾಣಿಕ ಕಾರ್ಯ ನಿರ್ವಹಿಸುತ್ತಿದ್ದರು, ಸಹಕಾರ ಸಂಘದಲ್ಲಿ ಬಹಳ ಉತ್ತಮವಾಗಿ ರೈತರಿಗೆ ಸಕಾಲದಲ್ಲಿ ಸಾಲ ಸೌಲಭ್ಯಗಳನ್ನು ಒದಗಿಸುತ್ತಿದ್ದರು. ಹೊಸ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಓ ಎಸ್.ರವಿ ಅವರ ಸಾವು ನೋವು ತರಿಸಿದೆ,, ಕುಟುಂಬದ ಕಷ್ಟದಲ್ಲಿ ಎಲ್ಲರೂ ಭಾಗಿಯಾಗೋಣ ಎಂದರು.
ಸಿಇಓ ಅವರುಗಳು ತಮ್ಮ ಕರ್ತವ್ಯದ ಜೊತೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿ ಕೊಳ್ಳಿ,ಎಂದು ಸಲಹೆ ನೀಡಿದ ಅವರು, ಮರಣ ಹೊಂದಿದ ಡೈರಿ ಕಾರ್ಯದರ್ಶಿಯ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಲು ಮೈಮುಲ್ ನಲ್ಲಿ ರೈತ ಕಲ್ಯಾಣ ಟ್ರಸ್ಟ್ ಸ್ಥಾಪನೆ ಮಾಡಿದ್ದು ಇದೇ ಕಾರಣಕ್ಕೆ ಎಂದರಲ್ಲದೆ, ನೀವುಗಳು ಸಹ ಟ್ರಸ್ಟ್ ಸ್ಥಾಪನೆ ಮಾಡಿ ಎಂದರು
ಸಹಕಾರ ಸಂಘದ ಸಿಇಓಗಳು ಎಲ್ಲರು ಒಗ್ಗೂಡಿ ನಿಧನರಾದ ಸಿಇಓ ಎಸ್. ರವಿ ಅವರ ಹೆಸರಲ್ಲಿ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರ ಸಂಘ ಸ್ಥಾಪಿಸಿ ಸಂಘವನ್ನು ಆರ್ಥಿಕವಾಗಿ ಅಭಿವೃದ್ಧಿ ಪಡಿಸಿ ಕಷ್ಟದಲ್ಲಿರುವ ಸಿಇಓಗಳಿಗೆ ನೆರವಾಗಿ ಎಂದರು.
ಟಿಎಪಿಸಿಎಸ್ ಮಾಜಿ ಅಧ್ಯಕ್ಷ ಎಸ್.ಸಿದ್ದೇಗೌಡ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಅನುಸೂಯ ಮಾತನಾಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಹೆಬ್ಬಾಳು ನಾಗೇಂದ್ರ, ಹಂಪಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಶಾಂತ್ ಜೈನ್, ನಾರಾಯಣಪುರ ಸಹಕಾರ ಸಂಘದ ಅಧ್ಯಕ್ಷ ವಿಠಲ್, ಎಂಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರಾದ ಪೂಜಾ, ಮೋಹನ್ ರಾಜ್, ಪಿ.ಪ್ರತಾಪ್, ಎಪಿಎಂಸಿ ಕಾರ್ಯದರ್ಶಿ ಮಹೇಶ್, ಸಹಕಾರ ಅಭಿವೃದ್ಧಿ ಅಧಿಕಾರಿ ಎಸ್.ರವಿ, ಎಂ.ಡಿ.ಸಿ.ಸಿ. ಬ್ಯಾಂಕ್ ಮೇಲ್ವಿಚಾರಕರಾದ ದಿನೇಶ್ ಮೂಡಲಕೊಪ್ಪಲು, ಬಸವರಾಜು, ಉಮೇಶ್, ನಿಧನರಾದ ಸಿಇಓ ಪುತ್ರ ಮಹೇಶ್, ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರ ಸಂಘದ ಅಧ್ಯಕ್ಷ ಬಿ.ಹೆಚ್.ಮಹದೇವ್, ಉಪಾಧ್ಯಕ್ಷ ನಂಜುಂಡಸ್ವಾಮಿ ಮತ್ತೀತರರು ಇದ್ದರು.