Saturday, April 19, 2025
Google search engine

Homeಅಪರಾಧಗ್ರಾಪಂ ಉಪಾಧ್ಯಕ್ಷೆ ಪತಿ ಕೊಲೆ ಪ್ರಕರಣ: ರೌಡಿ ಧನರಾಜ್ ಭೋಲಾ ಬಂಧನ

ಗ್ರಾಪಂ ಉಪಾಧ್ಯಕ್ಷೆ ಪತಿ ಕೊಲೆ ಪ್ರಕರಣ: ರೌಡಿ ಧನರಾಜ್ ಭೋಲಾ ಬಂಧನ

ನಂಜನಗೂಡು : ತಾಲೂಕಿನ ದೇವರಸನಹಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಪತಿ ನಂಜುಂಡಸ್ವಾಮಿ ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ಮತ್ತೋರ್ವ ಆರೋಪಿಯನ್ನ ಬಂಧಿಸಲಾಗಿದೆ. ಈಗಾಗಲೇ ಬಿಜೆಪಿ ಮುಖಂಡ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ನಿನ್ನೆ ರಾತ್ರಿ ಮತ್ತೋರ್ವ ಆರೋಪಿಯನ್ನ ಬಂಧಿಸಿದ್ದಾರೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ ೫ಕ್ಕೆ ಏರಿದೆ.

ನಂಜನಗೂಡಿನ ರೌಡಿಶೀಟರ್ ಧನರಾಜ್ ಭೋಲಾ ಬಂಧಿತ ಅರೋಪಿ. ಈ ಹಿಂದೆ ಪಿಸ್ತೂಲ್ ಮಾರಾಟ ಪ್ರಕರಣದಲ್ಲಿ ಭಾಗಿಯಾಗಿದ್ದ ಧನರಾಜ್ ಭೋಲಾ ಜೈಲು ವಾಸ ಅನುಭವಿಸಿದ್ದ. ಇದೀಗ ನಂಜುಂಡಸ್ವಾಮಿ ಕೊಲೆ ಪ್ರಕರಣದಲ್ಲಿ ಇದೇ ಧನರಾಜ್ ಭೋಲಾ ಭಾಗಿಯಾಗಿ ಪೊಲೀಸರ ಅತಿಥಿಯಾಗಿದ್ದಾನೆ.
ದೇವರಸನ ಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದ ಸುಮತಿ ಅವಧಿ ಮುಗಿದಿದ್ದು ಒಪ್ಪಂದದ ಪ್ರಕಾರ ಉಪಾಧ್ಯಕ್ಷೆಯಾಗಿದ್ದ ನಂಜುಂಡಸ್ವಾಮಿ ಪತ್ನಿ ಸೌಭಾಗ್ಯ ರವರಿಗೆ ಅಧಿಕಾರ ನೀಡಬೇಕಿತ್ತು. ಆದರೆ ಈ ವಿಚಾರದಲ್ಲಿ ಸುಮತಿ ಸಂಬಂಧಿ ಹಾಗೂ ಹಾಲಿ ಸದಸ್ಯ ಗೋವರ್ಧನ್ ಅಡ್ಡಗಾಲು ಹಾಕಿ ಅಧಿಕಾರ ನೀಡಲು ಕ್ಯಾತೆ ತೆಗೆದಿದ್ದ. ಅಕ್ಟೋಬರ್ ೬ ರಂದು ಇದೇ ವಿಚಾರವಾಗಿ ಮಾತನಾಡಲು ನಂಜುಂಡಸ್ವಾಮಿ ಹಣದ ಸಮೇತ ತೆರಳಿದ್ದಾರೆ. ಗೋವರ್ಧನ್ ಹಾಗೂ ಇತರರನ್ನ ಭೇಟಿ ಮಾಡಿದ್ದಾರೆ. ಆ ದಿನ ರಾತ್ರಿ ನಂಜುಂಡಸ್ವಾಮಿ ಮನೆಗೆ ಹಿಂದಿರುಗಿಲ್ಲ. ಮರುದಿನ ಜಮೀನೊಂದರಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿ ಕಂಡುಬಂದಿದ್ದಾರೆ. ಆಸ್ಪತ್ರೆಗೆ ಸಾಗಿಸುವ ವೇಳೆ ನಂಜುಂಡಸ್ವಾಮಿ ಮೃತಪಟ್ಟಿದ್ದರು.

ನಂಜುಂಡಸ್ವಾಮಿ ಸಾವು ಅನುಮಾನಾಸ್ಪದವಾಗಿದೆ ಎಂದು ಪತ್ನಿ ಸೌಭಾಗ್ಯ ಪೊಲೀಸ್ ಠಾಣೆಯಲ್ಲಿ ಗೋವರ್ಧನ್ ವಿರುದ್ದ ದೂರು ನೀಡಿ ಕೊಲೆ ಎಂದು ಆರೋಪಿಸಿದ್ದರು. ಮತ್ತೊಂದೆಡೆ ಆರೋಪ ಹೊತ್ತ ಗೋವರ್ಧನ್ ಇದು ಅಪಘಾತ ಎಂದು ಬಿಂಬಿಸಿ ಪೊಲೀಸರನ್ನೇ ದಿಕ್ಕು ತಪ್ಪಿಸುವಂತೆ ಮಾಡಿದ್ದ. ಆದರೇ, ಸಂಚಾರಿ ಠಾಣೆ ಪೊಲೀಸರು ಕೂಲಂಕುಷವಾಗಿ ಪರಿಶೀಲನೆ ನಡೆಸಿದಾಗ ಅನುಮಾನದ ಹುತ್ತ ದಟ್ಟವಾಗಿ ಕಾಣಿಸಿತ್ತು. ಜೊತೆಗೆ ಉಪ್ಪಾರ ಜನಾಂಗದ ಮುಖಂಡರು ಕೊಲೆ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿ ನಂಜನಗೂಡು ಗ್ರಾಮಾಂತರ ಠಾಣೆಗೆ ಮುತ್ತಿಗೆ ಹಾಕಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಕೊಲೆ ಎಂದು ಖಚಿತವಾಗಿ ಗೋವರ್ಧನ್ ರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಸತ್ಯತೆ ಹೊರಬಿದ್ದಿತು. ಕೂಡಲೇ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಜಾಹಿರ್, ಮಣಿಕಂಠ ಹಾಗೂ ಮಹೇಂದ್ರ ಸೇರಿದಂತೆ ನಾಲ್ವರನ್ನ ಬಂಧಿಸಿದ್ದರು. ಇದೀಗ ೫ನೇ ಆರೋಪಿ ಧನರಾಜ್ ಭೋಲಾನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular