ರಾಮನಗರ: ರಾಮನಗರ ಜಿಲ್ಲೆ ಮತ್ತು ಚನ್ನಪಟ್ಟಣ ಅಭಿವೃದ್ಧಿಯ ಚಿಂತನೆ ಹೊತ್ತು ಪುನಃ ಕಾಂಗ್ರೆಸ್ ಸೇರಿರುವ ತನ್ನನ್ನು ಜನ ಗೆಲ್ಲಿಸಲಿದ್ದಾರೆ ಎಂದು ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಚುನಾವಣಾ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ೧೦ನೇ ಬಾರಿ ವೋಟು ಕೇಳಲು ಜನರ ಮುಂದೆ ನಿಂತಿದ್ದೇನೆ ಮತ್ತು ೫ ಬಾರಿ ಗೆಲ್ಲಿಸಿದ್ದಾರೆ. ಸ್ವಾರ್ಥದ ರಾಜಕಾರಣಿಗಳನ್ನು ಜಿಲ್ಲೆಯಿಂದ ದೂರವಿಟ್ಟು ನಿಸ್ವಾರ್ಥ ಮನೋಭಾವದಿಂದ ಜನ ಸೇವೆ ಮಾಡುವ ತನ್ನನ್ನು ಚನ್ನಪಟ್ಟಣದ ಮತದಾರರು ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಜೊತೆ ಮೈತ್ರಿ ಬೆಳೆಸಿ ತಮ್ಮ ಪಕ್ಷವನ್ನು ಪುನಶ್ಚೇತನಗೊಳಿಸಿಕೊಳ್ಳುವ ಯೋಚನೆಯನ್ನು ಕುಮಾರಸ್ವಾಮಿಯವರಲ್ಲಿ ಹುಟ್ಟಿಸಿದ್ದೇ ನಾನು. ಕಾಂಗ್ರೆಸ್ ಪಕ್ಷ ಸೇರುವ ದಿನವಷ್ಟೇ ಡಿಕೆ ಶಿವಕುಮಾರ್ ಅವರೊಂದಿಗೆ ಮಾತಾಡಿದ್ದು, ಉಪ ಚುನಾವಣೆಗೆ ಸಂಬಂಧಿಸಿದಂತೆ ಮೊದಲು ಮಾತಾಡಿಲ್ಲ ಎಮದು ಹೇಳಿದರು.