Sunday, April 20, 2025
Google search engine

Homeರಾಜ್ಯವಿದೇಶಾಂಗ ಸಚಿವಾಲಯ ಸಲಹಾ ಸಮಿತಿ ಸದಸ್ಯರಾಗಿ ಸಂಸದ ಡಾ.ಕೆ.ಸುಧಾಕರ್ ನೇಮಕ

ವಿದೇಶಾಂಗ ಸಚಿವಾಲಯ ಸಲಹಾ ಸಮಿತಿ ಸದಸ್ಯರಾಗಿ ಸಂಸದ ಡಾ.ಕೆ.ಸುಧಾಕರ್ ನೇಮಕ

ಚಿಕ್ಕಬಳ್ಳಾಪುರ: ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಲಹಾ ಸಮಿತಿಗೆ ಸದಸ್ಯರಾಗಿ ಸಂಸದ ಡಾ.ಕೆ.ಸುಧಾಕರ್ ಅವರು ನೇಮಕಗೊಂಡಿದ್ದಾರೆ.

ಕೇಂದ್ರ ವಿದೇಶಾಂಗ ಸಚಿವರಾದ ಎಸ್.ಜೈಶಂಕರ್ ಹಾಗೂ ವಿದೇಶಾಂಗ ಖಾತೆ ರಾಜ್ಯ ಸಚಿವರಾದ ಕೀರ್ತಿವರ್ಧನ್ ಸಿಂಗ್, ಪವಿತ್ರಾ ಮಾರ್ಗರೀಟಾ ಅವರ ನೇತೃತ್ವದ ಈ ಸಲಹಾ ಸಮಿತಿಯಲ್ಲಿ ಲೋಕಸಭೆಯ ೧೦ ಹಾಗೂ ರಾಜ್ಯಸಭೆಯ ೯ ಸದಸ್ಯರು, ರಾಜ್ಯಸಭೆಯಿಂದ ಒಬ್ಬರು ವಿಶೇಷ ಆಹ್ವಾನಿತ ಸದಸ್ಯರು ಮತ್ತು ಇಬ್ಬರು ಮಾಜಿ ಅಧಿಕಾರಿಗಳು ಸದಸ್ಯರಾಗಿ ನೇಮಕ ಮಾಡಲಾಗುತ್ತದೆ.

ಈ ಸಲಹಾ ಸಮಿತಿಯು ಸರ್ಕಾರದ ವಿದೇಶಾಂಗ ನೀತಿ, ವಿವಿಧ ಯೋಜನೆ, ಕಾರ್ಯಕ್ರಮ ಅನುಷ್ಠಾನದ ವಿಧಾನ ಹಾಗೂ ದೇಶದ ವಿದೇಶಾಂಗಕ್ಕೆ ಸಂಬಂಧಿಸಿದ ವಿಚಾರ ಕುರಿತು ಪರಾಮರ್ಶಿಸಲಿದೆ. ಹಾಗೂ ಸೂಕ್ತ ಸಲಹೆ, ಸೂಚನೆ ನೀಡಲಿದೆ.

RELATED ARTICLES
- Advertisment -
Google search engine

Most Popular