Saturday, April 19, 2025
Google search engine

Homeರಾಜ್ಯಈ ರೀತಿಯ ಸಣ್ಣತನದ ಮಾತಿಗೆ ಕಾಲವೇ ಉತ್ತರಿಸುತ್ತದೆ: ಡಿಕೆ ಸುರೇಶ್ ಹೇಳಿಕೆಗೆ ಹೆಚ್‌ಡಿಕೆ ತಿರುಗೇಟು

ಈ ರೀತಿಯ ಸಣ್ಣತನದ ಮಾತಿಗೆ ಕಾಲವೇ ಉತ್ತರಿಸುತ್ತದೆ: ಡಿಕೆ ಸುರೇಶ್ ಹೇಳಿಕೆಗೆ ಹೆಚ್‌ಡಿಕೆ ತಿರುಗೇಟು

ಬೆಂಗಳೂರು: ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಆರೋಗ್ಯದ ಬಗ್ಗೆ ಕಾಂಗ್ರೆಸ್ ನಾಯಕ ಡಿಕೆ ಸುರೇಶ್ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿರುವ ಕೇಮದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಈ ರೀತಿಯ ಸಣ್ಣತನದ ಮಾತಿಗೆ ಕಾಲವೇ ಉತ್ತರ ಕೊಡುತ್ತದೆ ಎಮದು ಕಿಡಿಕಾರಿದ್ದಾರೆ.

ನಾಳೆ ಆಂಬ್ಯುಲೆನ್ಸ್ ತೆಗೆದುಕೊಂಡು ಬಂದು ದೇವೇಗೌಡರು ಪ್ರಚಾರ ಮಾಡುತ್ತಾರೆ. ಪ್ರಚಾರಕ್ಕೆ ಬರಲಿ, ಅವರ ಆರೋಗ್ಯವೂ ಚೆನ್ನಾಗಿರಲಿ’ ಎಂದು ಡಿಕೆ ಸುರೇಶ್ ಚುನಾವಣಾ ಪ್ರಚಾರದಲ್ಲಿ ಹೇಳಿಕೆ ನೀಡಿದ್ದರು. ಡಿಕೆಸು ಅವರ ಈ ಹೇಳಿಕೆಗೆ ಬೆಂಗಳೂರಿನಲ್ಲಿ ತಿರುಗೇಟು ನೀಡಿದ ಅವರು, ದೇವೇಗೌಡರ ಆರೋಗ್ಯದ ಬಗ್ಗೆ ಕೇವಲವಾಗಿ ಮಾತನಾಡುತ್ತಿದ್ದಾರೆ. ಎಂಸಿ ಅಶ್ವತ್ಥ್ ಕೊಟ್ಟ ಹೇಳಿಕೆಯನ್ನೇ ಡಿಕೆ ಸುರೇಶ್ ಹೇಳಿದ್ದಾರೆ. ಇದೇ ಅಶ್ವತ್ಥ್ ಪರ ಹಿಂದೆ ದೇವೇಗೌಡರು ಹಳ್ಳಿ ಹಳ್ಳಿಗೆ ಪ್ರಚಾರಕ್ಕೆ ಬಂದಿರಲಿಲ್ವಾ ಆಗ ವ್ಯಾಮೋಹಕ್ಕೆ ಬಿದ್ದು ದೇವೇಗೌಡರು ಪ್ರಚಾರಕ್ಕೆ ಬಂದಿದ್ದರಾ ಎಂದು ಪ್ರಶ್ನೆ ಮಾಡಿದರು.

ದೇವೇಗೌಡರು ಬರುತ್ತಿರುವುದು ಮೊಮ್ಮಗನ ಪಟ್ಟಾಭಿಷೇಕಕ್ಕೆ ಎನ್ನುತ್ತಿದ್ದಾರೆ. ಅಶ್ವತ್ಥ್ ಗೆಲ್ಲಿಸಲು ಅವತ್ತು ದೇವೇಗೌಡರು ಹೋಗಿರಲಿಲ್ವಾ? ಅವತ್ತು ಯಾರಿಗೋಸ್ಕರ ದೇವೇಗೌಡರು ಹೋಗಿದ್ದರು ಕಾಂಗ್ರೆಸ್ ನಾಯಕರು ನೀಡುತ್ತಿರುವ ಹೇಳಿಕೆಗಳನ್ನು ಗಮನಿಸುತ್ತಿದ್ದೇನೆ. ಅವರು ತನ್ನನ್ನು ಕೆಣಕುವ ಮಾತುಗಳನ್ನಾಡುತ್ತಿದ್ದಾರೆ. ಅವರಿಗೆ ಉತ್ತರಿಸುವ ಗೋಜಿಗೆ ತಾನು ಹೋಗುವುದಿಲ್ಲ. ಎಲ್ಲದಕ್ಕೂ ಚನ್ನಪಟ್ಟಣದ ಜನತೆ ಮತ್ತು ಕಾಲವೇ ಉತ್ತರ ನೀಡಲಿದೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular