Sunday, April 20, 2025
Google search engine

Homeರಾಜ್ಯರಾಜ್ಯದ ಭವಿಷ್ಯ ರೂಪಿಸುವ ಉಪಚುನಾವಣೆ- ನಿಖಿಲ್ ಗೆಲ್ಲಿಸಿ ಶಕ್ತಿ ತುಂಬಬೇಕು: ಸಂಸದ ಯದುವೀರ್

ರಾಜ್ಯದ ಭವಿಷ್ಯ ರೂಪಿಸುವ ಉಪಚುನಾವಣೆ- ನಿಖಿಲ್ ಗೆಲ್ಲಿಸಿ ಶಕ್ತಿ ತುಂಬಬೇಕು: ಸಂಸದ ಯದುವೀರ್

ರಾಮನಗರ: ಇದು ರಾಜ್ಯದ ಭವಿಷ್ಯ ರೂಪಿಸುವ ಉಪಚುನಾವಣೆ ಯುವನಾಯಕ ನಿಖಿಲ್ ಭವಿಷ್ಯದ ನಾಯಕನಾಗುವ ಎಲ್ಲಾ ಗುಣಗಳು ಇವೆ. ಅದಕ್ಕೆ ಇಲ್ಲಿಂದ ಗೆಲ್ಲಿಸಿ ಶಕ್ತಿ ತುಂಬಬೇಕು ಎಂದು ಸಂಸದ ಯದುವೀರ್ ಹೇಳಿದ್ದಾರೆ.

ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಕೂಡ್ಲೂರು ಗ್ರಾಮದಲ್ಲಿ ಮತಯಾಚನೆ ಮಾಡಿದರು. ಬಳಿಕ ಮಾತನಾಡಿದ ಅವರು, ಜಯಚಾಮರಾಜೇಂದ್ರ ಒಡೆಯರ್ ಈ ಗ್ರಾಮಕ್ಕೆ ಬಂದಿದ್ದರು. ನನಗೂ ಕೂಡ ಇಂದು ಆ ಭಾಗ್ಯ ಸಿಕ್ಕಿದೆ ಎಂದರು.

ಕಳೆದ ಹತ್ತು ವರ್ಷಗಳಲ್ಲಿ ಮೋದಿ ಅವರು ಉತ್ತಮ ಆಡಳಿತ ನೋಡುತ್ತಿದ್ದೀರಿ. ಮತ್ತೊಂದೆಡೆ ರಾಜ್ಯದಲ್ಲಿ ಆರ್ಥಿಕತೆ ಅಧೋಗತಿಗೆ ಹೋಗುತ್ತಿರುವುದನ್ನು ಗಮನಿಸಿದ್ದು. ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಅನೇಕ ಹಗರಣಗಳ ಕುರಿತು ಹೋರಾಟ ಮಾಡಿ ಯುವ ನಾಯಕನಾಗಿ ನಿಖಿಲ್ ಗುರುತಿಸಿಕೊಂಡಿದ್ದಾರೆ. ಅವರಿಗೆ ಒಂದು ಅವಕಾಶ ನೀಡಿ ಎಂದರು.

RELATED ARTICLES
- Advertisment -
Google search engine

Most Popular