Monday, April 21, 2025
Google search engine

Homeರಾಜ್ಯಉಪಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ಗೆ ಸೋಲುವ ಭೀತಿ ಇದೆ: ಪ್ರಿಯಾಂಕ್ ಖರ್ಗೆ

ಉಪಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ಗೆ ಸೋಲುವ ಭೀತಿ ಇದೆ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಉಪಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ಗೆ ಸೋಲುವ ಭೀತಿ ಇದೆ. ಹೀಗಾಗಿ ವಕ್ಫ್ ವಿವಾದ ಮಾಡ್ತಿದ್ದಾರೆ. ಹಿಂದೂ-ಮುಸ್ಲಿಂ ಅಂತಾ ಮಾಡಿದ್ರೆ ಗೆಲ್ಲಬಹುದು ಅನ್ನೋದು ಇವರ ಪ್ಲ್ಯಾನ್ ಎಂದು ಬಿಜೆಪಿ-ಜೆಡಿಎಸ್ ವಿರುದ್ಧ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ವಿಕಾಸಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಉಪಚುನಾವಣೆ ಸೋಲುವ ಭಯದಿಂದ ಬಿಜೆಪಿ-ಜೆಡಿಎಸ್ ವಕ್ಫ್ ವಿವಾದವನ್ನ ಮಾಡ್ತಿದೆ. ಇದು ಬಿಜೆಪಿ-ಜೆಡಿಎಸ್ ಮಾಡ್ತಿರೋ ರಾಜಕೀಯ. ಯಾವುದು ದಾಖಲಾತಿ ಇರುತ್ತೋ ಆ ಆಸ್ತಿ ರೈತರಿಗೆ ಇರುತ್ತೆ. ಆದರು ಬಿಜೆಪಿ-ಜೆಡಿಎಸ್ ಅವರು ವಿವಾದ ಮಾಡ್ತಿದ್ದಾರೆ ಎಂದರು.

ಸಚಿವ ಎಂ.ಬಿ.ಪಾಟೀಲ್ ಅವರು ಎಲ್ಲಾ ವಿವರಣೆ ಕೊಟ್ಡಿದ್ದಾರೆ. ಯಾರು ಬೇಕಾದರೂ ಇದು ನಮ್ಮ ಆಸ್ತಿ ಕ್ಲೈಮ್ ಮಾಡಬಹುದು. ಆದರೆ ಅದಕ್ಕೆ ಬೇಕಾಗಿರೋದು ದಾಖಲಾತಿ. ದಾಖಲಾತಿ ಇದ್ದರೆ ಏನು ತೊಂದರೆ ಇಲ್ಲ ಅಂತಾ ನಿನ್ನೆ ಸಚಿವರು ಹೇಳಿದ್ದಾರೆ. ವಕ್ಫ್ ಅದಾಲತ್ ಆದಾಗ ನಮ್ಮ ಜಾಗ ಅಂತಾ ಕೆಲವರು ಹೇಳಿದ್ದಾರೆ. ಆದರೆ ಅದಕ್ಕೆ ಯಾರು ಆತಂಕ ಪಡೋ ಅಗತ್ಯ ಇಲ್ಲ. ಈಗಾಗಲೇ ಸರ್ಕಾರ ಇದರ ಬಗ್ಗೆ ಸ್ಪಷ್ಟನೆ ಕೊಟ್ಟಿದೆ. ರೈತರ ಜಾಗ ಸರ್ಕಾರ ವಾಪಸ್ ಪಡೆಯೊಲ್ಲ. ಯಾರೂ ಆತಂಕ ಪಡೋ ಅಗತ್ಯ ಇಲ್ಲ ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular