Saturday, April 19, 2025
Google search engine

Homeರಾಜ್ಯ70 ವರ್ಷ ವಯಸ್ಸು ದಾಟಿದ ಜನರ ಆಯುಷ್ಮಾನ್ ಭಾರತ್ ಸ್ಕೀಮ್‌ಗೆ ಪ್ರಧಾನಿ ನರೇಂದ್ರ ಚಾಲನೆ

70 ವರ್ಷ ವಯಸ್ಸು ದಾಟಿದ ಜನರ ಆಯುಷ್ಮಾನ್ ಭಾರತ್ ಸ್ಕೀಮ್‌ಗೆ ಪ್ರಧಾನಿ ನರೇಂದ್ರ ಚಾಲನೆ

ನವದೆಹಲಿ: ೭೦ ವರ್ಷ ವಯಸ್ಸಿನ ಗಡಿ ದಾಟಿದ ವೃದ್ದರಿಗೆ ಆಯುಷ್ಮಾನ್ ಭಾರತ್ ಸ್ಕೀಮ್ ಅನ್ನು ಜಾರಿ ತರಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಇಂದು ಈ ಸ್ಕೀಮ್ ವಿಸ್ತರಣೆಗೆ ಚಾಲನೆ ನೀಡಿದರು. ಯಾವುದೇ ಸಮುದಾಯದ, ಯಾವುದೇ ಆರ್ಥಿಕ ಸ್ತರಕ್ಕೆ ಸೇರಿದ ವೃದ್ಧರು ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯ ಮತ್ತು ಜನರಿಗೆಂದು ರೂಪಿಸಲಾಗಿದ್ದ ಈ ಸ್ಕೀಮ್ ಅನ್ನು ಈಗ ೭೦ ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ವಿಸ್ತರಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಇಂದು ಆರೋಗ್ಯ ಕ್ಷೇತ್ರದಲ್ಲಿ ಆಯುಷ್ಮಾನ್ ಭಾರತ್ ಸ್ಕೀಮ್ ವಿಸ್ತರಣೆ ಸೇರಿದಂತೆ ೧೨,೮೫೦ ಕೋಟಿ ರೂ ಮೌಲ್ಯದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು. ಕೆಲ ಯೋಜನೆಗಳು ಆರಂಭವಾದರೆ, ಇನ್ನೂ ಕೆಲ ಯೋಜನೆಗಳಿಗೆ ಅಡಿಗಲ್ಲು ಹಾಕಲಾಗಿದೆ.

ವಿವಿಧ ಯೋಜನೆಗಳ ಉದ್ಘಾಟನೆ ವೇಳೆ ಮಾತನಾಡಿದ ನರೇಂದ್ರ ಮೋದಿ, ದೆಹಲಿ ಮತ್ತು ಬಂಗಾಳದಲ್ಲಿ ಆಯುಷ್ಮಾನ್ ಭಾರತ್ ಸ್ಕೀಮ್ ಲಭ್ಯ ಇರುವುದಿಲ್ಲ ಎಂದು ವಿಷಾದಿಸಿದರು.

ಈ ಎರಡು ರಾಜ್ಯಗಳ ಸರ್ಕಾರಗಳು ಆಯುಷ್ಮಾನ್ ಭಾರತ್ ಸ್ಕೀಮ್ ಅನ್ನು ಜಾರಿಗೊಳಿಸುತ್ತಿಲ್ಲ. ಈ ಕಾರಣಕ್ಕೆ ಅಲ್ಲಿ ಸ್ಕೀಮ್ ಲಭ್ಯ ಇಲ್ಲ. ದೆಹಲಿ ಮತ್ತು ಪಶ್ಚಿಮ ಬಂಗಾಳದಲ್ಲಿರುವ ೭೦ ವರ್ಷಕ್ಕಿಂತ ಹೆಚ್ಚು ವಯಸ್ಸಿನ ವಯೋವೃದ್ಧರಿಗೆ ನಾನು ಕ್ಷಮೆ ಯಾಚಿಸುತ್ತೇನೆ. ರಾಜಕೀಯ ಕಾರಣಕ್ಕೆ ನಿಮ್ಮ ರಾಜ್ಯ ಸರ್ಕಾರಗಳು ಯೋಜನೆ ಜಾರಿಗೊಳಿಸುತ್ತಿಲ್ಲ ಎಂದು ನರೇಂದ್ರ ಮೋದಿ ಹೇಳಿದರು.

ಈ ಯೋಜನೆಯಲ್ಲಿ ಫಲಾನುಭವಿಗಳಿಗೆ ಒಂದು ವರ್ಷಕ್ಕೆ ೫ ಲಕ್ಷ ರೂ ಮೊತ್ತದ ಹೆಲ್ತ್ ಇನ್ಷೂರೆನ್ಸ್ ಕವರೇಜ್ ಇರುತ್ತದೆ. ವಯೋವೃದ್ಧರು ವಯ ವಂದನ ಕಾರ್ಡ್ ಅನ್ನು ಪಡೆದುಕೊಳ್ಳಬೇಕು. ಆ ಕಾರ್ಡ್ ಇಟ್ಟುಕೊಂಡು ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದು

RELATED ARTICLES
- Advertisment -
Google search engine

Most Popular