Sunday, April 20, 2025
Google search engine

Homeರಾಜ್ಯತಂದೆ ಮಾಡಿದ ಅವ್ಯವಸ್ಥೆಗಳಿಗೆ ಮಗ ಕಣ್ಣೀರು ಹಾಕುತ್ತಿದ್ದಾರೆ: ನಿಖಿಲ್ ವಿರುದ್ಧ ಸಿಪಿವೈ ವಾಗ್ದಾಳಿ

ತಂದೆ ಮಾಡಿದ ಅವ್ಯವಸ್ಥೆಗಳಿಗೆ ಮಗ ಕಣ್ಣೀರು ಹಾಕುತ್ತಿದ್ದಾರೆ: ನಿಖಿಲ್ ವಿರುದ್ಧ ಸಿಪಿವೈ ವಾಗ್ದಾಳಿ

ಚನ್ನಪಟ್ಟಣ: ನಿಖಿಲ್ ಕಣ್ಣೀರು ಹಾಕಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಯೋಗೇಶ್ವರ್, ಯುದ್ಧಭೂಮಿಯಲ್ಲಿ ಸೋಲುತ್ತಿರುವ ಸೈನಿಕನೊಬ್ಬ ಬಳಸುವ ಕೊನೆಯ ಅಸ್ತ್ರವೇ ಕಣ್ಣೀರು, ತಂದೆ ಮಾಡಿದ ಅವ್ಯವಸ್ಥೆಗಳಿಗೆ ಮಗ ಕಣ್ಣೀರು ಹಾಕುತ್ತಿದ್ದಾರೆ,

ನಾಯಕನಾದವರನು ಕಣ್ಣೀರು ಒರೆಸಬೇಕೇ ಹೊರತು ಕಣ್ಣೀರು ಹಾಕಬಾರದು ಎಂದು ನಿಖಿಲ್ ಕುಮಾರಸ್ವಾಮಿ ವಿರುದ್ಧ ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ವಾಗ್ದಾಳಿ ನಡೆಸಿದ್ದಾರೆ.

ಹೆಚ್‌ಡಿ ಕುಮಾರಸ್ವಾಮಿಯವರು ಎರಡು ಬಾರಿ ಶಾಸಕ ಮತ್ತು ಮುಖ್ಯಮಂತ್ರಿಯಾಗಿದ್ದರೂ ಕ್ಷೇತ್ರಕ್ಕಾಗಿ ಏನೂ ಮಾಡಿಲ್ಲ. ಅವರ ನಿಷ್ಕ್ರಿಯತೆ, ಉದಾಸೀನತೆಯಿಂದ ಜನ ಭ್ರಮನಿರಸನಗೊಂಡಿದ್ದಾರೆ. ಅವರು ಕ್ಷೇತ್ರವನ್ನು ಯಾಕೆ ಬಿಟ್ಟು ಹೋದರು ಮತ್ತು ಮಗನನ್ನು ಯಾಕೆ ತಂದಿದ್ದಾರೆ ಅಂತ ಗೊತ್ತಿಲ್ಲ. ಮೊದಲು ಪತ್ನಿಯನ್ನು ತಂದರು ಈಗ ಮಗ. ಅವರಿಗೆ ಸ್ವಾರ್ಥದ ರಾಜಕಾರಣ ಬಿಟ್ಟರೆ ಬೇರೇನೂ ಗೊತ್ತಿಲ್ಲ. ತಾಲೂಕಿನಲ್ಲಿ ಅರಾಜಕತೆ ಮನೆ ಮಾಡಿದೆ. ತನ್ನ ಗೆಲುವಿಗೆ ಎರಡೂ ಪಕ್ಷಗಳ ಕಾರ್ಯಕರ್ತರು ಟೊಂಕಕಟ್ಟಿ ನಿಂತಿದ್ದಾರೆ ಎಂದು ಅವರು ಹೇಳಿದರು.

RELATED ARTICLES
- Advertisment -
Google search engine

Most Popular