Sunday, April 20, 2025
Google search engine

Homeರಾಜ್ಯಕರ್ನಾಟಕದಲ್ಲಿ ಕಡ್ಡಾಯವಾಗಿ ಕನ್ನಡವೇ ವ್ಯಾವಹಾರಿಕ ಭಾಷೆ ಆಗಿರಬೇಕು : ಸಿಎಂ ಸಿದ್ದರಾಮಯ್ಯ

ಕರ್ನಾಟಕದಲ್ಲಿ ಕಡ್ಡಾಯವಾಗಿ ಕನ್ನಡವೇ ವ್ಯಾವಹಾರಿಕ ಭಾಷೆ ಆಗಿರಬೇಕು : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಕನ್ನಡ ಪ್ರಾಚೀನ ಭಾಷೆ. ಎರಡು ಸಾವಿರ ವರ್ಷಗಳ ಇತಿಹಾಸ ಇರುವ ಭಾಷೆ. ಇದು ಶಾಸ್ತ್ರೀಯ ಭಾಷೆ. ನಾವು ಮಾಡಬೇಕಿರೋದು, ಕನ್ನಡ ಕಲಿಸುವ ಮತ್ತು ಕನ್ನಡದಲ್ಲಿ ವ್ಯವಹರಿಸುವ ಕಾರ್ಯವನ್ನು ಮಾಡಬೇಕು. ಕರ್ನಾಟಕದಲ್ಲಿ ಕಡ್ಡಾಯವಾಗಿ ಕನ್ನಡವೇ ವ್ಯಾವಹಾರಿಕ ಭಾಷೆ ಆಗಿರಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಇಂದು ಶುಕ್ರವಾರ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿ ನಡೆದ ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೇ ಭಾಷೆ ಬಗ್ಗೆ ಹಾಗೂ ಸಂಸ್ಕೃತಿ ಬಗ್ಗೆ ಉದಾರತೆ ಇರಬಾರದು. ಅಭಿಮಾನ ಇರಬೇಕು. ಕನ್ನಡ ಶಾಸ್ತ್ರೀಯ ಭಾಷೆ. ಆದರೆ ಕೇಂದ್ರ ಸರ್ಕಾರ ಕನ್ನಡ ಭಾಷೆ ಅಭಿವೃದ್ಧಿಗೆ ಅನುದಾನ ನೀಡ್ತಾ ಇಲ್ಲ. ಅದನ್ನು ನಾನು ಈಗ ಮಾತಾಡಲ್ಲ. ಇಂತ ಸ್ಥಾನಮಾನ ಇರುವ ಭಾಷೆ ಕನ್ನಡ ಎಂದರು.

ಮನುಷ್ಯತ್ವ ಪ್ರೀತಿಸಲು ಉದಾರತೆ ಇರಬೇಕು. ಆದರೆ ಭಾಷೆಗೆ ಇರಬಾರದು. ತಮಿಳುನಾಡಿನವರು ಇಲ್ಲಿ ಬಂದು ತಮಿಳು ಮಾತನಾಡಿದರೆ ನಾವು ಅವರದೇ ಭಾಷೆಯಲ್ಲಿ ಮಾತನಾಡುತ್ತೇವೆ. ತೆಲಗು ಮಾತಾಡಿದರೆ ನಾವೂ ಕೂಡ ತೆಲಗು ಮಾತನಾಡುತ್ತೇವೆ. ಇನ್ನು ನಮಗೆ ಇಂಗ್ಲಿಷ್ ಬರದೇ ಇದ್ದರೂ ಇಂಗ್ಲಿಷ್ ಮಾತಾಡ್ತೇವೆ. ಬೇರೆ ಭಾಷೆ ಮಾತಾಡಬೇಡಿ ಎನ್ನಲ್ಲ, ಆದರೆ ಎಲ್ಲರೂ ಮೊದಲು ಕನ್ನಡ ಮಾತಾಡಿ ಎಂದರು.

ನಾನು ೧೯೮೩ ರಲ್ಲಿ ಕಾವಲು ಸಮಿತಿ ಅಧ್ಯಕ್ಷ ಆಗಿದ್ದೆ. ನಾನು ರಾಮಕೃಷ್ಣ ಹೆಗಡೆಯವರಿಗೆ ಕನ್ನಡ ಕಾಯಲು ಕಾವಲು ಸಮಿತಿ ಬೇಕಲ್ಲ ಎಂದು ಕೇಳಿದೆ. ನೋಡಿ ಎಂತ ಪರಿಸ್ಥಿತಿ ಇದೆ. ಕಾವಲು ಸಮಿತಿ ಎಂದು ತಮಿಳುನಾಡು, ಕೇರಳ, ಆಂಧ್ರಪ್ರದೇಶ ಎಲ್ಲೂ ಇಲ್ಲ . ಆದರೆ, ಕನ್ನಡಕ್ಕೆ ಕಾವಲು ಸಮಿತಿ ರಚಿಸಲಾಗಿತ್ತು. ಈಗ ಕಾವಲು ಸಮಿತಿ ಹೆಸರಲ್ಲಿ ಇಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇದೆ. ನೋಡಿ ಎಂತಹ ಪರಿಸ್ಥಿತಿ ಇದೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular