ಮಂಗಳೂರು (ದಕ್ಷಿಣ ಕನ್ನಡ): ವಕ್ಫ್ ಕಾನೂನು ದೇಶಕ್ಕೆ ಮಾರಕವಾಗಿದ್ದು, ರೈತರಿಗೆ, ಹಿಂದೂಗಳಿಗೆ ಭೀತಿ ಹುಟ್ಟಿದೆ. ಒಮ್ಮೆ ವಕ್ಫ್ ಆಸ್ತಿಯೆಂದು ಹಕ್ಕು ಸ್ಥಾಪಿಸಿದರೆ ಅದನ್ನು ಸಾಮಾನ್ಯ ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ, ಟ್ರಿಬ್ಯುನಲ್‌ನಲ್ಲೇ ಪ್ರಶ್ನಿಸಬೇಕು. ಹಾಗಾಗಿ ವಕ್ಫ್ ಕಾನೂನು ಸಂವಿಧಾನ ವಿರೋಧಿ ಕಾನೂನು ಆಗಿದೆ ಎಂದು ಸಂಸದ ಬ್ರಿಜೇಶ್ ಚೌಟ ಆರೋಪಿಸಿದ್ದಾರೆ.
ಅವರು ಮಂಗಳೂರು ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರಕಾರ ವಕ್ಫ್ ಕಾನೂನಿಗೆ ತಿದ್ದುಪಡಿ ಮಾಡಲು ಮುಂದಾಗಿರುವ ಮಧ್ಯೆ ಕಾಂಗ್ರೆಸ್ ಆಡಳಿತವಿರುವ ರಾಜ್ಯದಲ್ಲಿ ರೈತರ ಜಮೀನನ್ನು ಕಬಳಿಸಲು ಅವಕಾಶ ಕೊಡಲಾಗಿದೆ. ವಿಜಯಪುರದ ಕೋಣವಾಡ ಗ್ರಾಮದಲ್ಲಿ 1,200 ರೈತರ ಭೂಮಿಯನ್ನು ವಕ್ಫ್ ಆಸ್ತಿಯೆಂದು ಘೋಷಣೆ ಮಾಡುವ ದುಸ್ಸಾಹಸಕ್ಕೆ ರಾಜ್ಯ ಸರಕಾರ ಕೈ ಹಾಕಿದೆ ಎಂದು ಹೇಳಿದರು.