ತಿ.ನರಸೀಪುರ: ನೊಂದವರು, ಅನ್ಯಾಯಕ್ಕೆ ಒಳಗಾದವರ ಪರ ನಾವು ಹಾಗೂ ನಮ್ಮ ಪಕ್ಷ ನಿಲ್ಲುತ್ತದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಮತ್ತು ಬಿಜೆಪಿ ಹಿರಿಯ ಮುಖಂಡ ಕೆ. ಶಿವರಾಮ್ ಹೇಳಿದರು.
ಪಟ್ಟಣದ ಮೃತ ವೇಣುಗೋಪಾಲ್ ನಿವಾಸಕ್ಕೆ ಭೇಟಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಹಿಂದೂ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಗಳಾಗುತ್ತಿವೆ. ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ, ಇಂಥ ಹೀನ ಕೃತ್ಯಗಳು ನಿಲ್ಲಬೇಕು ಎಂದು ಒತ್ತಾಯಿಸಿದರು. ಮೃತ ವೇಣುಗೋಪಾಲನನ್ನು ನಾವು ತಂದುಕೊಡಲು ಸಾಧ್ಯವಿಲ್ಲ. ಇಂಥ ಕೃತ್ಯಗಳು ನಡೆಯಬಾರದಿತ್ತು. ನಿಮ್ಮ ದುಃಖದಲ್ಲಿ ನಾವು ಭಾಗಿಯಾಗುತ್ತೇವೆ. ಈ ರೀತಿಯ ಕೃತ್ಯಗಳು ನಡೆಯದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು ಹಾಗೂ ವೇಣುಗೋಪಾಲ್ ಪತ್ನಿ ಪೂರ್ಣಿಮಾ ಮತ್ತು ಮಗುವಿನ ಜೀವನಕ್ಕೆ ಸೂಕ್ತ ಭದ್ರತೆ ನೀಡಬೇಕು. ಆ ಮಗುವಿನ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ವೇಣುಗೋಪಾಲ್ ಕುಟುಂಬಕ್ಕೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ಧನ ಸಹಾಯ ಮಾಡಿದರು.
ಇತ್ತೀಚೆಗೆ ಮೃತಪಟ್ಟ ವೇಣುಗೋಪಾಲ್ ಮನೆಗೆ ಬಿಜೆಪಿ ಮುಖಂಡ ಶಿವರಾಮ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ಧನ ಸಹಾಯ ಮಾಡಿದರು. ಈ ಸಂದರ್ಭದಲ್ಲಿ ವರುಣ ಮಂಡಲ ಕಾರ್ಯದರ್ಶಿ ರಂಗು ನಾಯಕ್, ಬಿಜೆಪಿ ಜಿಲ್ಲಾ ಎಸ್. ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಆಲಗೂಡು ಮಂಜು, ಚೌಹಳ್ಳಿ ಸಿದ್ದರಾಜು, ಬೈರಾಪುರ ಬಾಲು ಸೇರಿದಂತೆ ಮುಖಂಡರಾದ ವಿಜಯ ಕುಮಾರ್, ನಿಂಗರಾಜು (ಸಣ್ಣ), ನಂದನ್ ಕುಮಾರ್ ಮತ್ತಿತರರು ಹಾಜರಿದ್ದರು.