ಮೈಸೂರು: ನಾನು ಹುಟ್ಟಿದ್ದು ಮೈಸೂರಿನಲ್ಲಿ. ನನ್ನಚಿನ್ನಾರಿ ಮುತ್ತಾ ಸಿನಿಮಾ ಶೂಟಿಂಗ್‌ಆಗಿದ್ದು ಮಹದೇವಪುರ, ನಿನಗಾಗಿ ಸಿನಿಮಾದ ಶೂಟಿಂಗ್‌ಕೂಡಇಲ್ಲೆಆಗಿದ್ದು, ಈ ಕಾರಣದಿಂದ ನನಗೂ ಮತ್ತು ಮೈಸೂರಿಗೂ ಅವಿನಾಭಾವ ನಂಟಿದೆ. ಮೈಸೂರಿಗೆ ಬರಲು ಸಣ್ಣ ನೆಪ ಸಿಕ್ಕರೂ ಸಾಕು ಬಂದು ಬಿಡುತ್ತೇನೆಎಂದು ಹೇಳುವ ನಟ ವಿಜಯರಾಘವೇಂದ್ರ ಭಾವುಕರಾದರು.
ಮಹಾರಾಣಿ ಮಹಿಳಾ ಕಲಾ ಕಾಲೇಜು ಸ್ನಾತಕ ಮತ್ತು ಸ್ನಾತಕೋತ್ತರಕೇಂದ್ರ ಮತ್ತುಕಾಲೇಜಿನ ಸಾಂಸ್ಕೃತಿಕ ವೇದಿಕೆ ವತಿಯಿಂದಕಾಲೇಜಿನ ನಾಲ್ವಡಿಕೃಷ್ಣರಾಜಒಡೆಯರ್ ವೇದಿಕೆಯಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ವೇದಿಕೆ, ಎನ್‌ಎಸ್‌ಎಸ್, ಎನ್‌ಸಿಸಿ, ಸ್ಕೌಟ್ಸ್ ಮತ್ತುಗೈಡ್ಸ್ ಹಾಗೂ ಯುವರೆಡ್‌ಕ್ರಾಸ್ ಚಟುವಟಿಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರಎರಡೂಚಟುವಟಿಕೆಯಲ್ಲಿಯೂ ಆಸಕ್ತಿವಹಿಸಿ ತೊಡ ಗಿಕೊಳ್ಳಬೇಕು. ವಿದ್ಯಾರ್ಥಿಗಳು ಇಂಟರ್‌ನೆಟ್, ಸಾಮಾಜಿಕ ಜಾಲತಾಣಗಳಿಂದ ಸ್ವಲ್ಪದೂರುಇರಬೇಕು. ಓದು ಮತ್ತು ಕಲೆ ಎರಡರತ್ತಲೂ ಆಸಕ್ತಿ ವಹಿಸಬಹುದು. ಹಾಗಾಗಿ, ವಿದ್ಯಾರ್ಥಿಗಳು ಮೊಬೈಲ್‌ಕಡೆ ಗಮನ ಬಿಡಿ, ಮನಸ್ಸುಗಳ ಕಡೆ ಗಮನ ನೀಡಿಎಂದು ಸಲಹೆ ನೀಡಿದರು.
ಶಾಸಕ ಕೆ.ಹರೀಶ್‌ಗೌಡ ಮಾತನಾಡಿ, ವಿದ್ಯಾರ್ಥಿಜೀವನದಲ್ಲಿ ಸಾಂಸ್ಕೃತಿ ಚಟುವಟಿಕೆಗಳು ಕಡ್ಡಾಯವಾಗಿಇರಬೇಕು. ವಿದ್ಯಾರ್ಥಿಗಳು ಅದರಲ್ಲಿ ತೊಡಗಿಕೊಳ್ಳಬೇಕು. ಪಠ್ಯೇತರ ಚಟುವಟಿಕೆಗಳು ಕೂಡ ನಮಗೆ ಜೀವನಾನುಭವವನ್ನು ನೀಡುತ್ತವೆಎಂದು ತಿಳಿಸಿದರು.
ನನ್ನಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಹಲವು ಶಾಲಾ-ಕಾಲೇಜುಗಳಿಂದ ನಾನಾ ದೂರುಗಳು ಬಂದಿವೆ. ಆದರೆ, ಮಹಾರಾಣಿ ಕಲಾ ಕಾಲೇಜಿನಿಂದಅಂತಹಯಾವುದೇ ದೂರುಗಳು ಬಂದಿಲ್ಲ. ಇಲ್ಲಿನ ವಿದ್ಯಾರ್ಥಿನಿಯರುಕೂಡ ಶಿಸ್ತು, ಸಂಯಮದಿಂದಇರುವುದು ಖುಷಿ ನೀಡಿದೆ. ಒಂದು ಶಿಕ್ಷಣ ಸಂಸ್ಥೆಯಲ್ಲಿ ಗುರುಗಳು ಯಾವರೀತಿಇರುತ್ತಾರೋ, ಅದೇರೀತಿ ವಿದ್ಯಾರ್ಥಿಗಳೂ ಇರುತ್ತಾರೆ. ಈ ಶಿಸ್ತು, ಸಂಯಮ ಹೀಗೆ ಮುಂದುವರೆಯಲಿ ಎಂದರು. ಕಾಲೇಜಿನಲ್ಲಿ ಬಿಸಿಎ ಕೋರ್ಸ್‌ಗೆ ಚಾಲನೆ ನೀಡಲಾಯಿತು. ವೇದಿಕೆಯಲ್ಲಿ ನಟ ವಿಜಯರಾಘವೇಂದ್ರಅವರನ್ನು ಸನ್ಮಾನಿಸಲಾಯಿತು. ಮುಖ್ಯಮಂತ್ರಿರೆಕಮೆಂಡೇಷನ್‌ಅವಾರ್ಡ್ ಪಡೆದಿರುವ ಎನ್‌ಸಿಸಿಯ ವಿದ್ಯಾರ್ಥಿನಿಯರಾದ ಸುನಿತಾ ಶಿವಣ್ಣ, ಮಾನ್ಯ, ಶಾಲಿನಿ (ಮೂವರು ದ್ವಿತೀಯ ಬಿಎ) ಮತ್ತುಉತ್ತಮ ನಾಯಕತ್ವಗುಣಇರುವ ವರಲಕ್ಷ್ಮಿ (ತೃತೀಯ ಬಿಎ) ಮತ್ತು ಭೂಮಿಕಾ (ದ್ವಿತೀಯ ಬಿಎ) ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿಕಾಲೇಜಿನ ಪ್ರಾಂಶುಪಾಲ ಡಾ.ಬಿ.ವಿ.ವಸಂತಕುಮಾರ್, ಸಾಂಸ್ಕೃತಿಕ ವೇದಿಕೆ ಅಧ್ಯಾಪಕ ಕಾರ್ಯದರ್ಶಿ ಡಾ.ಆರ್.ಜಯರಾಜ್, ಅಧ್ಯಾಪಕಖಜಾಂಚಿಡಾ.ಬಿ.ಸವಿತಾ, ಯೇಸುದಾಸ್, ವಿದ್ಯಾರ್ಥಿಅಧ್ಯಕ್ಷರಾದ ಪ್ರಿಯಾಂಕ, ಕಾರ್ಯದರ್ಶಿ ಜೈಬಾ, ಐ.ಎನ್.ರೋಜಾ, ಸ್ವಾತಿ ಸೇರಿದಂತೆಅನೇಕರು ಭಾಗವಹಿಸಿದ್ದರು
ಹಾಡು ಹೇಳಿ ರಂಜಿಸಿದ ಚಿನ್ನಾರಿ ಮುತ್ತಾ: ಜಾಜಿ ಮಲ್ಲಿಗೆ ನೋಡೆ, ಸೂಜುಗದ ಹೂವೆ ನೋಡೆ, ಎನ್ನ ಮ್ಯಾಲ ಮುನಿವಾರೇ.. ಎಂಬ ತಮ್ಮದೇಅಭಿನಯದ ಸೇವಂತಿ, ಸೇವಂತಿ ಚಿತ್ರದ ಹಾಡನ್ನು ಹೇಳುವ ಮೂಲಕ ವಿಜಯರಾಘವೇಂದ್ರ ವಿದ್ಯಾರ್ಥಿಗಳನ್ನು ರಂಜಿಸಿದರು.
ಹಾಡು ಹೇಳುತ್ತಿದ್ದಂತೆ ವಿದ್ಯಾರ್ಥಿನಿಯರು ಸಿಳ್ಳೆ, ಚಪ್ಪಾಳೆಯ ಸುರಿಮಳೆಗೈದು, ಡ್ಯಾನ್ಸ್ ಮಾಡಬೇಕುಎಂದು ಕೂಗು ಹಾಕಿದರು.ವೇದಿಕೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ವಿಜಯರಾಘವೇಂದ್ರಅವರೊಂದಿಗೆ ಸೆಲ್ಫಿ ಕ್ಲಿಕಿಸಿಕೊಳ್ಳಲು ವಿದ್ಯಾರ್ಥಿನಿಯರು ಮುಗಿಬಿದ್ದರು.
ಬಿಸಿಎಗೆ ಪ್ರವೇಶಾತಿಆರಂಭ: ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಬಿಸಿಎ ಕೋರ್ಸ್‌ಆರಂಭವಾಗಿದ್ದು, ವಿದ್ಯಾರ್ಥಿ ವೇತನದ ಸೌಲಭ್ಯ, ಸುಸಜ್ಜಿತಗ್ರಂಥಾಲಯ, ಉತ್ತಮ ಪರಿಸರ, ಸುಸಜ್ಜಿತ ಪ್ರಯೋಗಾಲಯ, ವೈ-ಫೈ ಸೌಲಭ್ಯ ಹೆಚ್ಚಿನ ಮಾಹಿತಿಗೆ ೯೦೩೫೩೪೩೭೧೭/೮೭೬೨೧೮೪೩೩೪೭ ಸಂಪರ್ಕಿಸಬಹುದು.