Sunday, April 20, 2025
Google search engine

Homeರಾಜ್ಯಮುಂದಿನ ಮೂರುವರೆ ವರ್ಷ ರಾಜ್ಯದ ಪೂರ್ಣಪ್ರಮಾಣದ ಮುಖ್ಯಮಂತ್ರಿ ನಾನೇ : ಸಿಎಂ ಸಿದ್ದರಾಮಯ್ಯ

ಮುಂದಿನ ಮೂರುವರೆ ವರ್ಷ ರಾಜ್ಯದ ಪೂರ್ಣಪ್ರಮಾಣದ ಮುಖ್ಯಮಂತ್ರಿ ನಾನೇ : ಸಿಎಂ ಸಿದ್ದರಾಮಯ್ಯ

ಬಳ್ಳಾರಿ : ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಯು ತೀವ್ರ ರಂಗೇರಿದ್ದು, ಇದರ ಮಧ್ಯೆ ನಿನ್ನೆ ಸಿಎಂ ಸಿದ್ದರಾಮಯ್ಯ ಅವರು ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತ ವಿಚಾರಣೆ ಎದುರಿಸಿದ್ದಾರೆ. ಇಂದು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಬೊಮ್ಮಘಟ್ಟದಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿ ಮಾತನಾಡಿ, ಮುಂದಿನ ಮೂರುವರೆ ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ಇರಲಿದ್ದು ರಾಜ್ಯದ  ಪೂರ್ಣ ಪ್ರಮಾಣದ ಮುಖ್ಯಮಂತ್ರಿ ನಾನೇ ಆಗಿರುತ್ತೇನೆ ಎಂದು ತಿಳಿಸಿದರು.

ಇಂದು ಗುರುವಾರ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಬೊಮ್ಮಘಟ್ಟದಲ್ಲಿ ಸಮಾವೇಶದಲ್ಲಿ ಮಾತನಾಡಿದ ಅವರು, ಸಂಡೂರಿನಲ್ಲಿ ಅಭಿವೃದ್ಧಿ ಆಗಬೇಕಾದರೆ ಕಾಂಗ್ರೆಸ್ ಗೆ ಮತ ನೀಡಿ. ಅನಿವಾರ್ಯವಾಗಿ ಸಂಡೂರು ಕ್ಷೇತ್ರದ ಉಪಚುನಾವಣೆ ಬಂದಿದೆ. ಈ ತುಕಾರಾಂ ಗೆ ನಾವೇ ಒತ್ತಡ ಹಾಕಿ ಎಂಪಿ ಚುನಾವಣೆ ಗೆಲ್ಲಿಸಿದ್ದೀರಿ. ಲೋಕಸಭಾ ಚುನಾವಣೆಯಲ್ಲಿ ತುಕಾರಾಮಗೆ ಆಶೀರ್ವಾದ ಮಾಡಿದ್ದೀರಿ.ಹೀಗಾಗಿ ಅನಿವಾರ್ಯವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು ಎಂದರು.

RELATED ARTICLES
- Advertisment -
Google search engine

Most Popular