ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ವಿಧಾನ ಸಭಾ ಕ್ಷೇತ್ರದ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕು ಕೃಷಿಕ ಸಮಾಜ ಸಂಸ್ಥೆಯ ಆಡಳಿತ ಮಂಡಳಿಯ 36 ನಿರ್ದೇಶಕ ಸ್ಥಾನಕ್ಕೆ ಡಿಸೆಂಬರ್ 15ರಂದು ಚುನಾವಣೆ ನಡೆಯಲಿದೆ.
ಚುನಾವಣೆಗೆ ನಾಮಪತ್ರ ನವೆಂಬರ್ 31 ರಿಂದ ಡಿ.6 ರ ವರಿಗೆ ಸಲ್ಲಿಸ ಬಹುದಾಗಿದ್ದು ಡಿ.7 ರಂದು ನಾಮಪತ್ರ ಪರೀಶೀಲನೆ ನಡೆಯಲಿದ್ದು ನಾಮಪತ್ರ ವಾಪಸ್ ಪಡೆಯಲು ಡಿ.9 ಕೊನೆಯ ದಿನವಾಗಿದೆ ಅಗತ್ಯ ಬಿದ್ದರೆ ಚುನಾವಣೆ ಡಿ.15 ರಂದು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಕೆ.ಆರ್.ನಗರ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಚುನಾವಣೆ ನಡೆಯಲಿದೆ.
ಆಜೀವ ಸದಸ್ಯರ ಅರ್ಹ ಮತದಾರರ ಪಟ್ಟಿಯನ್ನು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ತಿದ್ದುಪಡಿ ಇದ್ದಲ್ಲಿ ನವೆಂಬರ್ 12ರ ಒಳಗೆ ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಕೃಷಿ ಭವನ ಇಲ್ಲಿಗೆ ತಿದ್ದುಪಡಿಗೆ ಮನವಿಯನ್ನು ಸಲ್ಲಿಸಬಹುದಾಗಿದೆ.
ಸಾಲಿಗ್ರಾಮ ತಾಲೂಕಿಗೆ 18 ಮತ್ತು ಕೆ.ಆರ್.ನಗರ ತಾಲೂಕಿಗೆ 18 ಸ್ಥಾನಗಳನ್ನು ನಿಗಧಿ ಪಡಿಸಲಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆ ಆರ್ ನಗರ ಹಾಗೂ ಸಾಲಿಗ್ರಾಮ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳನ್ನು ಸಂಪರ್ಕಿಸಬಹುದಾಗಿದೆ
ಕೆ.ಆರ್.ನಗರ ತಾಲೂಕು ಚುನಾವಣಾಧಿಕಾರಿ ಸಹಾಯಕ ಕೃಷಿ ನಿರ್ದೇಶಕ ಮಲ್ಲಿಕಾರ್ಜುನ್ ಮತ್ತು ಸಾಲಿಗ್ರಾಮ ತಾಲೂಕಿನ ಚುನಾವಣಾಧಿಕಾರಿ ಸಹಾಯಕ ಕೃಷಿ ಅಧಿಕಾರಿ ಪ್ರಶನ್ನ ದಿವಾಣ್ ತಿಳಿಸಿದ್ದಾರೆ.