ಹುಬ್ಬಳ್ಳಿ: ಈ ಉಪಚುನಾವಣೆ ಬಿಜೆಪಿ ಬಸವರಾಜ ಬೊಮ್ಮಾಯಿ ವರ್ಸಸ್ ಕಾಂಗ್ರೆಸ್ ಸರ್ಕಾರ. ಇದು ಕಾಂಗ್ರೆಸ್‌ನ ಸರ್ವಾಧಿಕಾರ, ದಬ್ಬಾಳಿಕೆಯ ಸರ್ಕಾರ ನಡೀತಾ ಇದೆ. ವಕ್ಫ್ ನೋಟಿಸ್ ವಾಪಸ್ ಪಡೆದಿರೋದು ಕಣ್ಣು ಒರೆಸೋ ತಂತ್ರ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣದ ಹೊಳೆ ಹರಿಸೋಕೆ ಆರಂಭ ಮಾಡಿದ್ದಾರೆ. ಹಣ ಹಂಚುವುದರಲ್ಲಿ ಅವರಲ್ಲೇ ಪೈಪೋಟಿ ನಡೆದಿದೆ. ಸಮುದಾಯವಾರು ಶಾಸಕರು, ಸಚಿವರು ಹಣ ಹಂಚುತ್ತ ಇದ್ದಾರೆ. ಇಂತಹ ಹಣದ ಹೊಳೆ ಎಲ್ಲೂ ನೋಡಿಲ್ಲ ಎಂದರು.
ವಕ್ಫ್ ಹಿನ್ನೆಲೆ ಹಾವೇರಿ ರೈತನ ಸಾವಿನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಇದು ಸತ್ಯವಾದದ್ದು, ಕೋರ್ಟ್ ಗೆ ಹೋಗುವುದಕ್ಕಾಗಲ್ಲ. ಅದಾಲತ್‌ಗೆ ಹೋಗಬೇಕು ಅಲ್ಲಿ ಸಿಗಲ್ಲ. ಅಧಿಕಾರಿಗಳು ಮಾತು ಕೇಳಲ್ಲ. ಇಂತಹ ಪರಿಸ್ಥಿತಿ ಸಿಲುಕಿದ ರೈತರು ಏನು ಮಾಡುತ್ತಾರೆ? ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ ಮೇಲೆ ಅವರ ಮೇಲೆ ಕೇಸ್ ಹಾಕುತ್ತಾರೆ. ಇದು ಸರ್ವಾಧಿಕಾರ, ದಬ್ಬಾಳಿಕೆಯ ಸರ್ಕಾರ ನಡೀತಾ ಇದೆ. ಹಿಂದೆ ಎಮರ್ಜೆನ್ಸಿಯಲ್ಲಿ ಇದೆಲ್ಲ ಆಗಿದೆ. ಆಮೇಲೆ ಪರಿಸ್ಥಿತಿ ಹೇಗಾಗಿದೆ ಅನ್ನೋದು ಗೊತ್ತಿದೆ. ಅದೇ ಈ ಸರ್ಕಾರಕ್ಕೂ ಆಗುತ್ತದೆ ಎಂದು ಹೇಳಿದ್ದಾರೆ.