ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಸೇನಾಧಿಕಾರಿ ಹುತಾತ್ಮರಾಗಿದ್ದು, ಮೂವರು ಗಾಯಗೊಂಡಿದ್ದಾರೆ.
ಸೇನಾಧಿಕಾರಿಯನ್ನು ನಯೀಬ್ ಸುಬೇದಾರ್ ರಾಕೇಶ್ ಕುಮಾರ್ ಎಂದು ಗುರುತಿಸಲಾಗಿದೆ.
ಭಾರತೀಯ ಸೇನೆ ಹಾಗೂ ಜಮ್ಮು ಕಾಶ್ಮೀರದ ಪೊಲೀಸರ ತಂಡಗಳು ಉಗ್ರರಿಗಾಗಿ ಜಂಟಿ ಶೋಧ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಉಗ್ರರ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ನ.10 ರಂದು ಕಿಶ್ತ್ವಾರ್‌ನ ಭರ್ಟ್ ರಿಡ್ಜ್ ಪ್ರದೇಶದಲ್ಲಿ 2 ಪ್ಯಾರಾ (ವಿಶೇಷ ಪಡೆಯ) ನಾಲ್ವರು ಗಾಯಗೊಂಡಿದ್ದರು. ಬಳಿಕ ಅವರನ್ನು ಚಿಕಿತ್ಸೆಗಾಗಿ ಉಧಂಪುರಕ್ಕೆ ವಿಮಾನದಲ್ಲಿ ಕಳುಹಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಸೇನಾಧಿಕಾರಿ ನೈಬ್ ಸುಬೇದಾರ್ ಕುಮಾರ್ ಸಾವನ್ನಪ್ಪಿದ್ದಾರೆ.
ಅದೇ ಸ್ಥಳದಿಂದ ಕೆಲವು ಕಿ.ಮೀ. ದೂರದಲ್ಲಿರುವ ಕುಂಟ್ವಾರ ಮತ್ತು ಕಿಶ್ತ್ವಾರ್‌ನ ಕೇಶ್ವಾನ್ ಅರಣ್ಯದಲ್ಲಿ ವಿಲೇಜ್ ಡಿಫೆನ್ಸ್ ಗ್ರೂಪ್‌ನ ಇಬ್ಬರು ಸದಸ್ಯರು ಪತ್ತೆಯಾಗಿದ್ದಾರೆ. ಇನ್ನೂ ಅದೇ ತಂಡದ ಇಬ್ಬರನ್ನು ಅಪಹರಿಸಿ ಹತ್ಯೆಗೈದಿದ್ದಾರೆ.