- “ನವಭಾರತದ ಉಪಕ್ರಮಗಳನ್ನು ಸಾಧಿಸಲು ನಿಯೋಬಯಾಲಜಿಯ ಮಾದರಿ..ಮೈಟೊಕಾಂಡ್ರಿ ಯದೊಂದಿಗೆ..”: ಜೀವಕೋಶವೇ.. ಜೈವಿಕ ತಂತ್ರಜ್ಞಾನದ ತಳಹದಿ – ವಿಜ್ಞಾನಿ ಡಾ. ಗಿರೀಶ್ ಚಂದ್ರನ್
ಬೆಂಗಳೂರು: ಬೆಂಗಳೂರಿನ ಹೆಸರಾಂತ ಪಿ. ಇ. ಎಸ್ ವಿಶ್ವ ವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ವಿಶೇಷ ತಜ್ಞ ಉಪನ್ಯಾಸ ನೀಡಿದ ಮೈಸೂರಿನ ಯುವ ವಿಜ್ಞಾನಿ ಡಾ. ಗಿರೀಶ್ ಚಂದ್ರನ್ ತಮ್ಮ ತಜ್ಞ ಉಪನ್ಯಾಸದಲ್ಲಿ ಮಾತನಾಡುತ್ತಾ ಇತ್ತೀಚಿನ ಜೀವನ ವ್ಯವಸ್ಥೆಯಲ್ಲಿ ಗಂಭೀರವಾಗಿ ಕಾಡುತ್ತಿರುವ ಪಾರ್ಕಿನ್ ಸನ್ ಕಾಯಿಲೆಯ ಹಿನ್ನೆಲೆ ಕುರಿತಾದ ಜೀವ ರಾಸಾಯನಿಕ ಅಂಶಗಳ ಬಗ್ಗೆ ವಿಷದವಾಗಿ ವಿವರಿಸಿದರು. ಅಲ್ಲದೇ, Paradigm of Neobiologia..with Mitochondria.. to achieve initiatives of New India ಎಂಬ ಮುಖ್ಯ ಶೀರ್ಷಿಕೆಯಡಿ ಮೈಟೊಕಾಂಡ್ರಿಯ ಮಾದರಿಯೊಂದಿಗೆ ನವಭಾರತದ ಉಪಕ್ರಮಗಳನ್ನು ಸಾಧಿಸಲು ನಿಯೋಬಯಾಲಜಿಯ ಕಾರ್ಯ-ಪಥದ ಸಮೀಕರಣಗಳನ್ನು ಪ್ರಾತ್ಯಕ್ಷಿಕ ಉದಾಹರಣೆಗಳೊಂದಿಗೆ ಅದ್ಭುತ ವಿಶ್ಲೇಷಣೆ ನೀಡಿದರು.
ಕಾರ್ಯಕ್ರಮವನ್ನು ಪಿ. ಇ. ಎಸ್ ವಿಶ್ವ ವಿದ್ಯಾಲಯ ದ ಜೈವಿಕ ತಂತ್ರಜ್ಞಾನದ ಪ್ರಾಧ್ಯಾಪಕ ಹಾಗು ಸಂಶೋಧನಾ ವಿಜ್ಞಾನಿ, ಡಾ. ಜಿ ಪಾಂಡುರಂಗ ಮೂರ್ತಿ ಯವರು ಜೀವಸೃಜನ ಕ್ಲಬ್ ನ ಆಶ್ರಯದಲ್ಲಿ ಆಯೋಜನೆ ಮಾಡಿದ್ದು, ವಿಭಾಗದ ಮುಖ್ಯಸ್ಥರಾದ ಡಾ. ಕೆ. ಎನ್. ಶಾಂತಿ ಅಧ್ಯಕ್ಷತೆ ವಹಿಸಿದ್ದರು.
ಸರಿ ಸುಮಾರು 150 ವಿದ್ಯಾರ್ಥಿಗಳು ವಿಶೇಷ ತಜ್ಞ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಸಿದ್ದರು. ತಜ್ಞ ಉಪನ್ಯಾಸದ ನಂತರ ವಿದ್ಯಾರ್ಥಿಗಳು ಪ್ರಶ್ನೋತ್ತರ ಸಂವಾದ ನಡೆಸಿದರು.
ವಿಶೇಷ ತಜ್ಞ ಉಪನ್ಯಾಸ ನಡೆಸಿಕೊಟ್ಟ ಡಾ. ಗಿರೀಶ್ ಚಂದ್ರನ್ ರವರನ್ನು ಸಂಪ್ರದಾಯ ಮಾದರಿಯಲ್ಲಿ ಶಾಲು ಹೊದಿಸಿ, ಸ್ಮರಣಿಕೆಯಂದಿಗೆ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬೋಧಕ ಸಿಬ್ಬಂದಿಗಳಾದ ಡಾ. ದಿನೇಶ್, ಡಾ.ಸಸ್ಮಿತಾ, ಡಾ. ಜುನಕ್ ಚಟರ್ಜಿ, ಡಾ. ಕವಿತ ಆರ್. ವಿ ಮತ್ತು ಡಾ. ಕವಿತ ಎಸ್. ಎಚ್ ಹಾಜರಿದ್ದರು.
ಕಾರ್ಯಕ್ರಮವನ್ನು ಜೈವಿಕ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ನಿರ್ವಹಿಸಿದ್ದು, ಶ್ರೀ ಅನಿವೇಷ್ ಶಾಸ್ತ್ರೀಯಬದ್ದ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ ಒಟ್ಟು ಕಾರ್ಯಕ್ರಮವನ್ನು ಕು.ವೇದ ಗಜಾನನ ಭಟ್ ಕ್ರಿಯಾಶೀಲವಾಗಿ ನಿರೂಪಣೆ ಮಾಡಿದ್ದು ,ಕು.ವಂದನಾ ಉಪನ್ಯಾಸ ತಜ್ಞ ರ ಕುರಿತಾದ ಪರಿಚಯವನ್ನು ಅತ್ಯಂತ ವಿಶೇಷವಾಗಿ ನಡೆಸಿಕೊಟ್ಟರು. ಅಂತಿಮವಾಗಿ ಕಾರ್ಯಕ್ರಮವು ಕು.ಅದಿತಿಯ ವಂದನಾರ್ಪಣೆ ಯೊಂದಿಗೆ ಮುಕ್ತಾಯ ಗೊಂಡಿತು.