ಕೆ.ಆರ್.ನಗರ,ಜು,೧೬:- ವಾರದ ರಜೆ ಎಂದು ಶಾಲಾ ಬಾಲಕಿ ಕಾವೇರಿ ನದಿ ವೀಕ್ಷಿಸಿ ನೀರು ಕುಡಿಯಲು ಹೋದಾಗ ಕಾಲು ಜಾರಿ ನದಿಗೆ ಬಿದ್ದಿರುವ ಘಟನೆ ಕೆ.ಆರ್.ನಗರ ತಾಲ್ಲೂಕಿನ ಕಪ್ಪಡಿ ಕ್ಷೇತ್ರದ ಬಳಿ ನಡೆದಿದ್ದು, ಮೃತ ಬಾಲಕಿ ಗಂಧನಹಳ್ಳಿ ಗ್ರಾಮದ ಲೋಕೇಶ್ ಎಂಬುವರ ಪುತ್ರಿ ಸ್ಪೂರ್ತಿ (೧೩) ಎಂಬ ದುರ್ದೈವಿಯಾಗಿದ್ದಾಳೆ. ಬಾಲಕಿಯ ಶವಕ್ಕಾಗಿ ಅಗ್ನಿಶಮಕ
ದಳವರು ಶವ ಪತ್ತೆಗಾಗಿ ಬೋಟ್ ಮೂಲಕ ಹುಡುಕಾಟ ನಡೆಸುತ್ತಿದ್ದಾರೆ.
ಇಂದು ಭಾನುವಾರ ತಂದೆತಾಯಿ ಜೊತೆಯಲ್ಲಿ ಕಪ್ಪಡಿ ಕ್ಷೇತ್ರದ ಕಾವೇರಿ ನದಿ ವೀಕ್ಷಿಸಿ ಬರೋಣವೆಂದು ತೆರಳಿದ್ದಾರೆ ಗಂಧನಹಳ್ಳಿ ಮಾರ್ಗವಾಗಿ ಕಾವೇರಿ ನದಿಯ ಎಡದಂಡೆ ಭಾಗದ ಕಡೆ ವೀಕ್ಷಿಸಿ ಪಕ್ಕದಲ್ಲಿರುವ ಗದ್ದೆಯಲ್ಲಿ ಊಟ ಮಾಡಿ ನಂತರ ನದಿಯುಲ್ಲಿ ನೀರು ಕುಡಿದು ಬರುತ್ತೇನೆ ಎಂದು ನದಿಗೆ ನೀರಿ ಕುಡಿಯುವ ಇಳಿದಾಗ ಕಾಲು ಜಾರಿ ನದಿಗೆ ಬಿದ್ದಿದ್ದು, ನದಿಯಲ್ಲಿನ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾಳೆ.
ಇತ್ತ ತಂದೆ ಲೋಕೇಶ್ ಪುತ್ರಿ ಕಾಣುತ್ತಿಲ್ಲ ಎಂದು ಗಾಬರಿಯಿಂದ ನದಿಯ ಪಕ್ಕದಲ್ಲಿ ಹುಡುಕಿದರು ಪುತ್ತಿ ಪತ್ತೆಯಾಗದ ಕಾರಣ ಕೂಡಲೇ ಕೆ.ಆರ್.ನಗರ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಲಾಗಿ, ಅಗ್ನಿಶಾಮಕ ಠಾಣಾಧಿಕಾರಿ ಲಕ್ಷ್ಮಿಕಾಂತ್ ಅವರು ಕೂಡಲೇ ತಮ್ಮ ಸಿಬ್ಬಂದಿಗಳೊಡನೆ ಆಗಮಿಸಿ ಬೋಟ್ ಮೂಲಕ ಬಾಲಕಿ ಬಿದ್ದ ಸ್ತಳದಿಂದ ವ್ಯಾಪಕವಾಗಿ ಶೋಧ ನಡೆಸುತ್ತಿದ್ದಾರೆ. ಇದೂವರೆವಿಗೂ ಬಾಲಕಿ ಶವ ಪತ್ತೆಯಾಗಿಲ್ಲ, ಈ ಸಂಬಂಧ ಕೆ.ಆರ್.ನಗರ ಪೊಲೀಸರು ದೂರು ದಾಖಲಿಸಿದ್ದು, ಬಾಲಕಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು.