ಪಿರಿಯಾಪಟ್ಟಣ: ತಾಲೂಕಿನ ಕೊಪ್ಪ ಗ್ರಾಮದ ರಿಯಲ್ ಎಸ್ಟೇಟ್ ಉದ್ಯಮಿ ಸುರೇಶ್(40) ಹಾಗು ಅವರ ಪತ್ನಿ ಪಲ್ಲವಿ(28) ಅವರ ಮೃತ ದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮ ಬಳಿಯ ದೊಡ್ಡಹೊನ್ನೂರು ಗ್ರಾಮದ ಜಮೀನಿನ ಹಳೆ ಮನೆಯೊಂದರಲ್ಲಿ ನವಂಬರ್ 13 ರ ಬುಧವಾರ ಸಂಜೆ ಸಮಯ ಪತ್ತೆಯಾಗಿದೆ.
ವೃತ್ತಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ಸುರೇಶ್ ಹಾಗೂ ಅವರ ಪತ್ನಿ ಪಲ್ಲವಿ ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ ಈ ಸಂಬಂಧ ಮೃತರ ಸಹೋದರ ರವಿ ಅವರು ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಘಟನಾ ಸ್ಥಳಕ್ಕೆ ಸಬ್ ಇನ್ಸ್ಪೆಕ್ಟರ್ ಅಜಯ್ ಕುಮಾರ್ ಹಾಗೂ ಸಿಬ್ಬಂದಿ ಸೇರಿದಂತೆ ಪೊಲೀಸ್ ಇಲಾಖೆ ಮೇಲಧಿಕಾರಿಗಳು ಭೇಟಿ ನೀಡಿ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ತನಿಖೆ ಕೈಗೊಂಡಿದ್ದಾರೆ.