Monday, April 21, 2025
Google search engine

Homeರಾಜ್ಯಆಪರೇಷನ್ ಕಮಲಕ್ಕೆ ಬಿಜೆಪಿ 16 ತಿಂಗಳಿಂದ ಪ್ರಯತ್ನಿಸುತ್ತಿದೆ : ಸಂತೋಷ್ ಲಾಡ್ ಆರೋಪ

ಆಪರೇಷನ್ ಕಮಲಕ್ಕೆ ಬಿಜೆಪಿ 16 ತಿಂಗಳಿಂದ ಪ್ರಯತ್ನಿಸುತ್ತಿದೆ : ಸಂತೋಷ್ ಲಾಡ್ ಆರೋಪ

ಹುಬ್ಬಳ್ಳಿ : ಕಾಂಗ್ರೆಸ್ 50 ಶಾಸಕರಿಗೆ ತಲಾ ಒಂದೊಂದು ಕೋಟಿಯಂತೆ 50 ಕೋಟಿ ರೂಪಾಯಿ ಆಫರ್ ನೀಡಿದ್ದರು ಎಂದು ಸಿಎಂ ಸಿದ್ದರಾಮಯ್ಯ ಗಂಭೀರವಾಗಿ ಆರೋಪಿಸಿದ್ದರು. ಇದೀಗ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕಳೆದ 16 ತಿಂಗಳಿನಿಂದ ಬಿಜೆಪಿ ಆಪರೇಷನ್ ಕಮಲಕ್ಕೆ ಪ್ರಯತ್ನಿಸುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಆಪರೇಷನ್ ಕಮಲಕ್ಕೆ ನಿರಂತರ ಪ್ರಯತ್ನ ಮಾಡುತ್ತಿದೆ. ಆಪರೇಷನ್ ಕಮಲ ಮಾಡುವುದರಲ್ಲಿ ಬಿಜೆಪಿಯವರು ನಿಸ್ಸಿಮರು. ಆಪರೇಷನ್ ಕಮಲಕ್ಕೆ 16 ತಿಂಗಳಿಂದ ಪ್ರಯತ್ನ ಮಾಡುತ್ತಿದ್ದಾರೆ ನಮಗೆ ಜನಬೆಂಬಲ ಇದೆ ಇದನ್ನೇ ಮುಖ್ಯಮಂತ್ರಿ ಹೇಳಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.

ಬಿಜೆಪಿಯವರು 100 ಸ್ಮಾರ್ಟ್ ಸಿಟಿ ಮಾಡುವುದಾಗಿ ಹೇಳಿದ್ದರು ಏನಾಗಿದೆ ಎಲ್ಲಿದೆ ಸ್ಮಾರ್ಟ್ ಬಿಜೆಪಿಯವರು ಇದಕ್ಕೆ ಉತ್ತರ ಕೊಡಲಿ ಬಿಜೆಪಿಯವರು ಕಟ್ಟಿದ ಬಿಲ್ಡಿಂಗ್ 10 11 ವರ್ಷದಲ್ಲಿ ಬಿದ್ದು ಹೋಗುತ್ತಿದೆ ಇದಕ್ಕೆ ಪ್ರಧಾನಿ ಮೋದಿ ಉತ್ತರ ಕೊಡಲಿ ಎಂದು ಹುಬ್ಬಳ್ಳಿಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

RELATED ARTICLES
- Advertisment -
Google search engine

Most Popular