ಮೈಸೂರು: ರಾಜ್ಯ ಸರ್ಕಾರಿ ನೌಕರರ ಸಂಘದ ನಂಜನಗೂಡು ತಾಲೂಕು ನಿರ್ದೇಶಕರ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಭೂಮಾಪನ ಇಲಾಖೆಯ ಎನ್.ಎಸ್. ಮಲ್ಲಿಕಾರ್ಜುನ ಸತತ ಮೂರನೇ ಬಾರಿಗೆ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದರೆ, ಶಿಕ್ಷಣ ಇಲಾಖೆಯ ವಿ.ವಿ. ಪ್ರಸನ್ನ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.
ತಾಲೂಕಿನ ವಿವಿಧ ಇಲಾಖೆಗಳ 31 ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿತ್ತು. ಈ ಚುನಾವಣೆಗೆ 46 ಮಂದಿ ನೌಕರರು ಉಮೇದುವಾರಿಕೆ ಸಲ್ಲಿಸಿದ್ದರು. ಪರಸ್ಪರ ಹೊಂದಾಣಿಕೆಯಿಂದ 4 ಮಂದಿ ನೌಕರರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದು, ವಿವಿಧ ಇಲಾಖೆಯ 17 ಮಂದಿ ನೌಕರರು ಅವಿರೋಧವಾಗಿ ಆಯ್ಕೆಯಾಗಿದ್ದರು.
ಇನ್ನುಳಿದ 14 ಮಂದಿ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 25 ಮಂದಿ ನೌಕರರು ಕಣದಲ್ಲಿದ್ದರು. ಕಾರಣಾಂತರಗಳಿಂದ ಎರಡು ಇಲಾಖೆಯವರು ಈ ಚುನಾವಣೆಯನ್ನು ಬಹಿಷ್ಕರಿಸಿದ ಪರಿಣಾಮ 12 ಸ್ಥಾನಗಳಿಗೆ ಚುನಾವಣೆ ನಡೆಯಿತು.
ವಿಜೇತರಾದವರು: ಕೆ.ಎಸ್. ವೆಂಕಟೇಶ್, ಸಿ. ಕಲ್ಪನಾ, ಎಂ.ದೀಪಕ್, ಎಚ್.ಎಂ. ಹನುಮಂತರಾಜು, ದೀಪು, ಸಿ. ವಿಜಯಕುಮಾರಿ, ಎನ್. ಗಿರೀಶ್, ಕೆ. ನಾಗೇಶ್, ಎಚ್.ಜಿ. ಮಹೇಶ, ಸಿ. ಪ್ರಕಾಶ.
ಅವಿರೋಧವಾಗಿ ಆಯ್ಕೆಯಾದವರು: ಡಾ. ಬಿ. ಅಶೋಕ ಕುಮಾರ್, ಎಸ್. ನಾಗೇಶ್, ಹೆನ್ರಿ ಡಿಸೋಜ, ಎಚ್.ಎಲ್. ಶಿವಣ್ಣ, ಅಂಕನಾಯಕ, ಮಹಾಲಕ್ಷ್ಮಿ, ಟಿ.ಕೆ. ರವಿ, ಬಿ. ಉಮೇಶ್, ಟಿ.ಡಿ. ಯಶೋಧರ, ಕೆ.ಬಿ. ಸತೀಶ್, ಆರ್. ಸಿದ್ದರಾಜು, ಡಿ. ಕುಮಾರ್, ಕೆ.ಜಿ. ಮಹಾದೇವನಾಯಕ, ಎನ್. ಶಿವಕುಮಾರ್, ಜಿ. ನೀಲಪ್ಪ, ಬಿ.ಎಂ. ಧ್ರುವಕುಮಾರ್, ಎಸ್.ಜಿ.ರೇವಣ್ಣ.
ನಿವೃತ್ತ ತಹಸೀಲ್ದಾರ್ ಕೆ.ಎಸ್.ಸುಬ್ರಹ್ಮಣ್ಯ ಚುನಾವಣಾಧಿಕಾರಿಯಾಗಿ, ಗ್ರಾಮ ಅಡಳಿತ ಅಧಿಕಾರಿ ಬಿ.ಎಸ್.ರಾಕೇಶ್ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.