ಬೆಂಗಳೂರು: ರಾಜ್ಯದಲ್ಲಿ ಮತ್ತೆ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಸರ್ಜರಿ ನಡೆದಿದ್ದು, 7 ಮಂದಿ ಐಪಿಎಸ್ ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಶಾಂತನು ಸಿನ್ಹಾ( ಡಿಐಜಿಪಿ, ಸಿಐಡಿ), ಜಿ ಸಂಗೀತ (ಎಸ್ಪಿ, ಸಿ ಐ ಡಿ), ಅಬ್ದುಲ್ ಅಹದ್ (ನಿರ್ದೇಶಕ ,ಬಿಎಂಟಿಸಿ ಸೆಕ್ಯೂರಿಟಿ ವಿಜಿನಲ್ಸ್) , ಲಕ್ಷ್ಮಣ್ ನಿಂಬರಗಿ (ಎಸ್ಪಿ, ವಿಜಯಪುರ), ಚೆನ್ನಬಸವಣ್ಣ ಲಂಗೋಟಿ (ನಿರ್ದೇಶಕ ಕರ್ನಾಟಕ ಪೊಲೀಸ್ ಅಕಾಡೆಮಿ(ಹೆಚ್ಚುವರಿ), ಪೃತ್ವಿಕ್ ಶಂಕರ್ (ಎಸ್ಪಿ, ಯಾದಗಿರಿ), ಶಿವಾಂಶು ರಾಜಪೂತ್ ಅವರನ್ನು (ಎಸ್ ಪಿ ರಾಜ್ಯ ಅಪರಾಧ ದಾಖಲೆ ವಿಭಾಗ) ವರ್ಗಾವಣೆ ಮಾಡಿ ಆದೇಶಿಸಲಾಗಿದೆ.