ಮೈಸೂರು : ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀರಾಂಪುರ ೨ನೇಹಂತ ಎಲ್.ಐ.ಜಿ ಕಾಲೋನಿಯ ಸಂಕಲ್ಪ ಸಿದ್ದಾರ್ಥ ಅಪಾರ್ಟ್‌ಮೆಂಟ್ ಹತ್ತಿರದಲ್ಲಿರುವ ಕ್ರಾಸ್‌ನಲ್ಲಿ ನ.೧೦ ರಂದು ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ೩೦ಗ್ರಾಂ ತೂಕದ ಚಿನ್ನದ ಮಾಂಗಲ್ಯ
ಸರವನ್ನು ಕಿತ್ತುಕೊಂಡು ಹೋಗಿದ್ದ ಸರಗಳ್ಳನನ್ನು ಪೊಲೀಸರು ಬಂಧಿಸಿ ೩೦ ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ವಶಪಡಿಸಿಕೊಳ್ಳಲಾಗಿದೆ.
ಉಪಪೊಲೀಸ್ ಆಯುಕ್ತರಾದ ರಮೇಶ್‌ಕುಮಾರ್ ಹೆಚ್.ಬಿ., ನೇತೃತ್ವದಲ್ಲಿ ಕುವೆಂಪುನಗರ ಪೊಲೀಸ್ ಇನ್ಸ್‌ಪೆಕ್ಟರ್ ಅರುಣ್ ಎಲ್., ಪಿಎಸ್‌ಐ ಗೋಪಾಲ್ ಎಸ್.ಪಿ., ಸಿಬ್ಬಂದಿಗಳಾದ ಆನಂದ್ ವಿ., ಮಂಜುನಾಥ್ ಕೆ.ಟಿ, ಮಹೇಶ್ವರ್, ಮಂಜು ಹೆಚ್.ವಿ, ನಾಗೇಶ್, ಯಶ್ವಂತ್, ಹಜರತ್ ಹಾಗೂ ಸುರೇಶ್ ತನಿಖೆ ಕೈಗೊಂಡಿದ್ದರು.