ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ದೇಶದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮೊದಲಿಗ ಸಂಗೊಳ್ಳಿ ರಾಯಣ್ಣನವರನ್ನು ಕುತಂತ್ರದಿoದ ಗಲ್ಲಿಗೇರಿಸಲು ಬ್ರಿಟಿಷ್ನವರು ಪ್ರಯತ್ನ ಪಟ್ಟ ರೀತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬಿಜೆಪಿ ಮತ್ತು ಜೆಡಿಎಸ್‌ನವರು ರಾಜಕೀಯ ಕುತಂತ್ರದಿoದ ಅಧಿಕಾರದಿಂದ
ಇಳಿಸಲು ಪ್ರಯತ್ನ ಮಾಡುತ್ತಿದ್ದು ಇದು ಜನ ಬೆಂಬಲವಿರುವವರೆಗೂ ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರಸಿದ್ದರಾಮಯ್ಯ ಹೇಳಿದರು.
ಕೆ.ಅರ್.ನಗರ ತಾಲೂಕಿನ ಸಿದ್ದನಕೊಪ್ಪಲು ಗ್ರಾಮದಲ್ಲಿ ನಿರ್ಮಾಣ ಮಾಡಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ಅನಾವರಣಗೊಳಿಸಿ ನಂತರ ನಡೆದವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ೧೩೬
ಶಾಸಕರ ಬೆಂಬಲದಿoದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರಿಗೆ ವಿರೋಧ ಪಕ್ಷದವರು
ಮಾಡುತ್ತಿರುವ ಕುತಂತ್ರಕ್ಕೆ ಅಂಜುವುದಿಲ್ಲ ಎಂದರು.
ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿ ಯೋಜನೆಯಗಳನ್ನು ಯಥಾವಾತ್ತಾಗಿ ಜಾರಿಗೆ ತಂದಿದ್ದು ಐದು ಗ್ಯಾರಂಟಿಗಳಿಗೆ ಸರ್ಕಾರ ವರ್ಷಕ್ಕೆ ಸುಮಾರು ೬೦ ಸಾವಿರ ಕೋಟಿ ವ್ಯಯ ಮಾಡುತ್ತಿದ್ದು ಇದರಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿಲ್ಲ ಕೇಂದ್ರ ಸರ್ಕಾರಕ್ಕಿಂತಲೂ ರಾಜ್ಯದ ಹಣಕಾಸು ಇಲಾಖೆ ಉತ್ತಮವಾಗಿದೆ ಎಂದು ಮಾಹಿತಿ ನೀಡಿದರು.
ಕ್ಷೇತ್ರದ ಶಾಸಕರಾಗಿರುವ ಡಿ.ರವಿಶಂಕರ್ ಜನಾನುರಾಯಿ ನಾಯಕರಾಗಿ ಉತ್ತಮವಾದ ಕೆಲಸ ಮಾಡುತ್ತಿದ್ದಾರೆ ಮುಖ್ಯಮಂತ್ರಿ ಸೇರಿದಂತೆ ಇತರ ಮಂತ್ರಿಗಳ ಬಳಿ ವೈಯುಕ್ತಿಕವಾಗಿ ಯಾವುದೇ ರೀತಿಯ ಅಪೇಕ್ಷೆ ಪಡೆಯದೆ ಕ್ಷೇತ್ರದ ಅಭಿವೃದ್ದಿ ಕಾರ್ಯಗಳಿಗಾಗಿ ಅನುದಾನ ಕೇಳುತ್ತಿದ್ದು ಅವರ ಮನವಿಗೆ ಪುರಸ್ಕರಿಸಿರುವ ರಾಜ್ಯ ಸರ್ಕಾರ ಸಾಕಷ್ಟು ಅನುದಾನ ನೀಡಿದೆ ಎಂದು ಹೇಳಿದರು.
ದಾಸ ಶ್ರೆಷ್ಟ ಭಕ್ತ ಕನಕದಾಸರು ಜ್ಞಾನ, ಭಕ್ತಿ, ಆಧ್ಯಾತ್ಮ ಮತ್ತು ಕೀರ್ತನೆಗಳ ಮೂಲಕ ಪ್ರಸಿದ್ದಿ ಹೊಂದಿದ್ದು ಸಂಗೊಳ್ಳಿ ರಾಯಣ್ಣ ದೇಶಭಕ್ತಿ ದೈರ್ಯ, ಶೌರ್ಯ ಪ್ರರಾಕ್ರಮ ವ್ಯಕ್ತಿಗಳಾಗಿದ್ದು ಈ ಮಹನೀಯರ ಜಯಂತಿ
ಆಚರಣೆಯನ್ನು ಹಿಂದುಳಿದ ವರ್ಗದವರು ಆಚರಣೆ ಮಾಡುತ್ತಿದ್ದು ಇದರ ಜತೆಗೆ ಅಹಿಂದ ವರ್ಗಕ್ಕೆ ಸೇರಿದ ಇತರ ಮಹನೀಯರ ಜಯಂತಿಗಳನ್ನು ಆಚರಣೆ ಮಾಡಿ ಗ್ರಾಮಗಳಲ್ಲಿ ಅವರುಗಳ ಪುತ್ಥಳಿಗಳನ್ನು ಅನಾವರಣ
ಮಾಡಿದಾಗ ಯುವಕರಲ್ಲಿ ಸ್ಪೂರ್ತಿ ಹೆಚ್ಚಾಗಲಿದೆ ಎಂದು ಹೇಳಿದರು.
ಶಾಸಕ ಡಿ.ರವಿಶಂಕರ್ ಮಾತನಾಡಿ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳ ಸಮಗ್ರ ಅಭಿವೃದ್ದಿಗಾಗಿ ಮುಖ್ಯಮಂತ್ರಿಗಳು ಸಾಕಷ್ಟು ಅನುದಾನ ನೀಡಿದ್ದು ಶೀಘ್ರದಲ್ಲಿಯೇ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ
ಸೇರಿದಂತೆ ಇತರ ಸಚಿವರ ಸಮ್ಮುಖದಲ್ಲಿ ಕಾಮಗಾರಿಗಳಿಗೆ ಚಾಲನೆ ಕೊಡಲಾಗುತ್ತದೆ ಎಂದು ಹೇಳಿದರು.
ಕಳೆದ ೧೫ ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಮತ ನೀಡುವ ಗ್ರಾಮಗಳು ಅಭಿವೃದ್ದಿಯಲ್ಲಿ ಕುಂಠಿತಗೊoಡಿದ್ದು ಅಂತಹ ಗ್ರಾಮಗಳಿಗೆ ಹೆಚ್ಚು ಒತ್ತು ನೀಡಿ ಕೆಲಸ ಮಾಡಲಿದ್ದು ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ ಎಂದ ಶಾಸಕರು ಅಭಿವೃದ್ದಿ ವಿಚಾರದಲ್ಲಿ ನಾನು ಎಂದಿಗೂ ರಾಜಕೀಯ ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.
ರಾಜ್ಯ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ.ಸುಬ್ರಹ್ಮಣ್ಯ, ತಾಲೂಕು ಅಧ್ಯಕ್ಷ ಚರ‍್ನಹಳ್ಳಿಶಿವಣ್ಣ, ಯುವ ಕಾಂಗ್ರೆಸ್ ಮುಖಂಡ ಜಿ.ಎಸ್.ವೆಂಕಟೇಶ್, ಮಾತನಾಡಿದರು. ಯುವ ಘರ್ಜನೆ ಮಹಿಳಾ ಸಂಘದ
ಅಧ್ಯಕ್ಷೆ ಸರಸ್ವತಿ, ಗ್ರಾಮದ ಮುಖಂಡರಾದ ಮಲ್ಲಿಕಾರ್ಜುನ್, ಗಣೇಶ್, ಮಾದೇಗೌಡ, ಶಿಲ್ಪಗೌತಮ್,
ತೋಟೇಗೌಡ, ಡಿ.ಕೆ.ಕೊಪ್ಪಲು ರಾಜಯ್ಯ, ಸಿದ್ದನಕೊಪ್ಪಲುರಾಘು, ಕುಮಾರ್, ನಾಗೇಂದ್ರ, ಇಂದ್ರೇಶ್, ಸಂದೀಪ್‌ಕುಮಾರ್ ಎಸ್.ಜೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್,
ವಕ್ತಾರ ಸೈಯದ್‌ಜಾಬೀರ್ ಮತ್ತಿತರರು ಇದ್ದರು.