Saturday, April 19, 2025
Google search engine

Homeರಾಜ್ಯರದ್ದುಪಡಿಸಿರುವ ಕಾರ್ಡ್ ನಲ್ಲಿ ಬಡವರಿದ್ದರೆ, ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡ್ತೀರಾ? : ಸಿದ್ದರಾಮಯ್ಯಗೆ ಸಿಟಿ ರವಿ...

ರದ್ದುಪಡಿಸಿರುವ ಕಾರ್ಡ್ ನಲ್ಲಿ ಬಡವರಿದ್ದರೆ, ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡ್ತೀರಾ? : ಸಿದ್ದರಾಮಯ್ಯಗೆ ಸಿಟಿ ರವಿ ಸವಾಲು

ಚಿಕ್ಕಮಗಳೂರು : ರದ್ದುಪಡಿಸಿರುವ ಬಿಪಿಎಲ್ ಕಾರ್ಡ್ ನಲ್ಲಿ ಬಡವರಿದ್ದರೆ, ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡ್ತೀರಾ?ಎಂದು ಚಿಕ್ಕಮಂಗಳೂರಿನಲ್ಲಿ ವಿಧಾನಪರಿಷತ್ ಬಿಜೆಪಿ ಸದಸ್ಯ ಸಿಟಿ ರವಿ ಸಿಎಂ ಸಿದ್ದರಾಮಯ್ಯಗೆ ಸವಾಲು ಹಾಕಿದ್ದಾರೆ.

ಚಿಕ್ಕಮಗಳೂರುನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅನರ್ಹರರನ್ನು, ನೌಕರರನ್ನು, ಟ್ಯಾಕ್ಸ್ ಕಟ್ಟುವವರ ಕಾರ್ಡುಗಳನ್ನು ರದ್ದುಪಡಿಸಲಿ. ಕಾನೂನು ಪ್ರಕಾರ ಹೋದರೆ ಎಷ್ಟು ಕಾರ್ಡ್ ರದ್ದಾಗುತ್ತದೆ ಲೆಕ್ಕ ಹಾಕಿದ್ದೀರಾ? ಕೆಲವು ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತ ಪಕ್ಷದ ಶಾಸಕರುಗಳು ಇವರು ನಮ್ಮ ಪಕ್ಷದವರೆಂದು ಕೆಲ ಕಾಡುಗಳನ್ನು ಉಳಿಸಿಕೊಂಡಿದ್ದಾರೆ.

ಮುಸ್ಲಿಮರಿಗೆ ಮಾತ್ರ ಬಿಪಿಎಲ್ ಕಾರ್ಡ್, ಹಿಂದುಗಳಿಗೆ ಇಲ್ವಾ? ಒಂದು ಕೋಮಿನವರನ್ನು ತೆಗೆದು ಮತ್ತೊಬ್ಬರನ್ನು ಬಿಡುವುದು ಯಾವ ನ್ಯಾಯ? ಎಂದು ಚಿಕ್ಕಮಗಳೂರಿನಲ್ಲಿ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿಟಿ ರವಿ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

RELATED ARTICLES
- Advertisment -
Google search engine

Most Popular