ಕಾಸರಗೋಡು : ಕೇರಳದಲ್ಲಿ ಸಮಗ್ರ ಶಿಕ್ಷಣದ ಪರಿಕಲ್ಪನೆಯೊಂದಿಗೆ ಆರಂಭಗೊಂಡಿರುವ ಜಾಮಿಆಃ ಸಅದಿಯ್ಯದ 55ನೇ ವಾರ್ಷಿಕ ಸನಮ ದಾನ ಮಹಾ ಸಮ್ಮೇಳನವು ನವೆಂಬರ್ 22, 23 ಮತ್ತು 24 ರಂದು ಕಾಸರಗೋಡು ದೇಳಿಯ ಸಅದಾಬಾದ್ ನಲ್ಲಿ ನಡೆಯಲಿದೆ ಎಂದು ಸಅದಿಯ್ಯ ಸ್ವಾಗತ ಸಮಿತಿ ಕರ್ನಾಟಕದ ವರ್ಕಿಂಗ್ ಚೆಯರ್ ಮ್ಯಾನ್ ಹಾಫಿಝ್ ಯಾಕೂಬ್ ಸಅದಿ ನಾವೂರು ತಿಳಿಸಿದ್ದಾರೆ. ಅವರು ಇಂದು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪ್ರೆಸ್ ಮೀಟ್ ನಲ್ಲಿ ಮಾತನಾಡಿದರು.
ಈ ಸಮ್ಮೇಳನದಲ್ಲಿ 445 ವಿದ್ಯಾರ್ಥಿಗಳಿಗೆ ಸಅದಿ ಪದವಿ, 44 ವಿದ್ಯಾರ್ಥಿಗಳಿಗೆ ಅಫ್ಲಲ್ ಸಅದಿ ಪದವಿ ಹಾಗೂ ಖುರ್ ಆನ್ ಕಂಠಪಾಠ ಮಾಡಿದ 28 ವಿದ್ಯಾರ್ಥಿಗಳಿಗೆ ಹಾಫಿಝ್ ಪದವಿಯನ್ನು ನೀಡಲಾಗುವುದು. ಸಮ್ಮೇಳನದ ಪೂರ್ವಭಾವಿಯಾಗಿ ನವೆಂಬರ್ 20 ರಂದು ಆಯ್ಕೆಮಾಡಿದ 165 ಎಸ್‌ವೈಎಸ್, ಎಸ್ಎಸ್ಎಫ್ ಮಿಸ್ಬಾಹುಸ್ಸುಆದ ಕಾರ್ಯಕರ್ತರ ಧ್ವಜಯಾನ (ಧ್ವಜ ಮೆರವಣಿಗೆ) ನಡೆಯಲಿದೆ. ಮಧ್ಯಾಹ್ನ 2ಗಂಟೆಗೆ ತಳಂಗರ ಮಾಲಿಕ್ ದಿನಾರ್ ದರ್ಗಾ ಝಿಯಾರತ್ ನಡೆಯಲಿದೆ. ಅಸ್ಸಯ್ಯದ್ ಪಿ.ಎಸ್.ಅಟ್ಟಕೋಯ ತಂಗಳ್ ಬಾಹಸನ್ ಪಂಜಿಕ್ಕಲ್ ಝಿಯಾರತ್ ಗೆ ನೇತೃತ್ವ ವಹಿಸಲಿದ್ದಾರೆ. ಧ್ವಜಯಾನದ ನಂತರ ಸಅದಿಯ್ಯ: ಕೋಶಾಧಿಕಾರಿ ಕಲ್ಲಟ್ರಿ ಮಾಹಿನ್ ಹಾಜಿ ಅವರು ಜಾಥಾ ನಾಯಕ ಎಸ್ ವೈಎಸ್ ಜಿಲ್ಲಾಧ್ಯಕ್ಷ ಕಟ್ಟಿಪ್ಪಾರ ಅಬ್ದುಲ್ ಖಾದಿರ್ ಸಖಾಫಿ ಅವರಿಗೆ ಧ್ವಜ ಹಸ್ತಾಂತರಿಸಲಿದ್ದಾರೆ.
ಸಂಜೆ 5ಗಂಟೆಗೆ ಸಮ್ಮೇಳನ ನಗರದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಅಸ್ಸಯ್ಯದ್ ಹಸನುಲ್ ಅಹ್ದಲ್ ತಂಙಲ್ ಧ್ವಜಾರೋಹಣ ನೆರವೇರಿಸುವರು. 21 ರಂದು ಬೆಳಿಗ್ಗೆ 10ಗಂಟೆಗೆ ಎನ್ ಆರ್ ಎ ಫಾಮ್ ಕಾನ್ (ಪ್ರವಾಸ ಕುಟುಂಬ ಸಂಗಮ)ವನ್ನು ಅಸ್ಸಯ್ಯದ್ ಕೆ.ಎಸ್.ಆಟ್ಟಕೋಯ ತಂಙಳ್ ಕುಂಬೋಳ್ ಉದ್ಘಾಟಿಸುವರು. ಎ.ಪಿ.ಅಬ್ದುಲ್ಲಾ ಮುಸ್ಲಿಯಾರ್ ಮಾಣಿಕ್ಕೋತ್ ಅಧ್ಯಕ್ಷತೆ ವಹಿಸುವರು. ಮುಸ್ತಫಾ ದಾರಿಮಿ ಪ್ರಾಸ್ತಾವಿಕ ಉಪನ್ಯಾಸ ನೀಡಲಿದ್ದಾರೆ ಎಂದರು.