Saturday, April 19, 2025
Google search engine

Homeರಾಜ್ಯಸುದ್ದಿಜಾಲಪಿರಿಯಾಪಟ್ಟಣ: ರಾಜ್ಯ ಮಟ್ಟದ ಅತ್ಯುನ್ನತ ಸಹಕಾರ ರತ್ನ ಪ್ರಶಸ್ತಿಗೆ ಎಚ್.ಪಿ ಪರಮೇಶ್ ಭಾಜನ

ಪಿರಿಯಾಪಟ್ಟಣ: ರಾಜ್ಯ ಮಟ್ಟದ ಅತ್ಯುನ್ನತ ಸಹಕಾರ ರತ್ನ ಪ್ರಶಸ್ತಿಗೆ ಎಚ್.ಪಿ ಪರಮೇಶ್ ಭಾಜನ

ವರದಿ: ಸತೀಶ್ ಆರಾಧ್ಯ

ಪಿರಿಯಾಪಟ್ಟಣ: ಸಹಕಾರ ಕ್ಷೇತ್ರದಲ್ಲಿನ ಸಾಧನೆಗೆ ದೊರೆಯುವ ರಾಜ್ಯ ಮಟ್ಟದ ಅತ್ಯುನ್ನತ ಸಹಕಾರ ರತ್ನ ಪ್ರಶಸ್ತಿಗೆ ಪಿರಿಯಾಪಟ್ಟಣ ತಾಲೂಕಿನ ಹಿಟ್ನಹಳ್ಳಿ ಗ್ರಾಮದ ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷರು ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕು ಅಧ್ಯಕ್ಷರಾದ ಎಚ್.ಪಿ ಪರಮೇಶ್ ಅವರು ಭಾಜನರಾಗಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ವತಿಯಿಂದ ನೀಡುವ ಸಹಕಾರ ರತ್ನ ಪ್ರಶಸ್ತಿಯನ್ನು ಈಚೆಗೆ ಬಾಗಲಕೋಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇರಿದಂತೆ ಹಲವು ಸಚಿವರು ಶಾಸಕರು ಗಣ್ಯರ ಸಮ್ಮುಖ ಎಚ್.ಪಿ ಪರಮೇಶ್ ಅವರು ಸ್ವೀಕರಿಸಿದರು.

ತಂಬಾಕು ಬೆಳೆಗಾರರ ಸಂಘದ ವಿವಿಧ ಹುದ್ದೆಗಳು ಸೇರಿದಂತೆ ಸಹಕಾರಿ ಕ್ಷೇತ್ರದಲ್ಲಿ ಎಚ್.ಪಿ ಪರಮೇಶ್ ಅವರ ಸಾಧನೆಯನ್ನು ಮನಗಂಡು ರಾಜ್ಯ ಸರ್ಕಾರ ವತಿಯಿಂದ ಈ ಬಾರಿ ಅವರಿಗೆ ಸಹಕಾರ ರತ್ನ ಪ್ರಶಸ್ತಿ ನೀಡಲಾಯಿತು, ಇವರ ಸಾಧನೆಗೆ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಪಿರಿಯಾಪಟ್ಟಣ ತಾಲೂಕು ಘಟಕ ಹಾಗೂ ಸಹಕಾರಿ ಬಂಧುಗಳು ಹಾಗೂ ಕುಟುಂಬದವರು ಅಭಿನಂದನೆ ಸಲ್ಲಿಸಿದರು.

RELATED ARTICLES
- Advertisment -
Google search engine

Most Popular