Saturday, April 19, 2025
Google search engine

Homeಅಪರಾಧಅಕ್ರಮ‌ ಮದ್ಯ ಮಾರಾಟ: ಮಾದಪ್ಪನ ಬೆಟ್ಟದಲ್ಲಿ ವಿವಿಧ ಮನೆಗಳ ಮೇಲೆ  ದಾಳಿ- ಮಹಿಳೆಯ ಬಂಧನ

ಅಕ್ರಮ‌ ಮದ್ಯ ಮಾರಾಟ: ಮಾದಪ್ಪನ ಬೆಟ್ಟದಲ್ಲಿ ವಿವಿಧ ಮನೆಗಳ ಮೇಲೆ  ದಾಳಿ- ಮಹಿಳೆಯ ಬಂಧನ

ಹನೂರು‌: ನಾಡಿನ ಪ್ರಮುಖ ಯಾತ್ರಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಮದ್ಯ ಮಾರಾಟ ಸಂಪೂರ್ಣ ನಿಷೇಧವಾಗಿದ್ದರೂ ಅಕ್ರಮವಾಗಿ ಮಾರಾಟ ಮಾಡಲು ಮುಂದಾಗಿದ್ದ ಮನೆಗಳ ಮೇಲೆ  ಸೋಮವಾರದಂದು ಪ್ರಾಧಿಕಾರದ ಅಧಿಕಾರಿಗಳು ಪೊಲೀಸರು ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ.

ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಲಕ್ಷಾಂತರ ಮಂದಿ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆಂದು    ಮಾರಾಟ ಮಾಡಲು ಅಕ್ರಮವಾಗಿ ಸಂಗ್ರಹಿಸಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಮಹಿಳೆಯೊಬ್ಬಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಇನ್ನು, ಕಾರ್ಯಾಚರಣೆ ವೇಳೆ ಸಾವಿರಾರು ಮದ್ಯದ ಪೌಚುಗಳನ್ನು ವಶಪಡಿಸಿಕೊಂಡಿದ್ದು ಕ್ಷೇತ್ರದಲ್ಲಿ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿತ್ತು ಎಂಬ ಆರೋಪಕ್ಕೆ  ಸಾಕ್ಷಿ ಒದಗಿಸಿದೆ.

RELATED ARTICLES
- Advertisment -
Google search engine

Most Popular