Saturday, April 19, 2025
Google search engine

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಸಾಲಿಗ್ರಾಮ‌ ತಾಲೂಕಿನ‌ ಚಿಕ್ಕಕೊಪ್ಪಲು ಗ್ರಾಮದಲ್ಲಿ ಸುಮಾರು 45 ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಆದಿಶಕ್ತಿ ದೊಡ್ಡಯ್ಯ- ಚಿಕ್ಕಯ್ಯ ಮತ್ತು ಹುಚ್ಚಮ್ಮ‌ ದೇವರ ದೇವಸ್ಥಾನದ ದೇವರುಗಳ ಪ್ರತಿಷ್ಠಾಪನಾ ಕಾರ್ಯಕ್ರಮ ಬಾರಿ ವಿಜೃಂಣೆಯಿಂದ ಸಾವಿರಾರು ಮಂದಿಯ ಸಮ್ಮುಖದಲ್ಲಿ ಶುಕ್ರವಾರ ನಡೆಯಿತು.

ಗ್ರಾಮದ ಕುಂಟಬೋರರ ವಂಶಸ್ಥರು ನಿರ್ಮಿಸಿರುವ ಈ ದೇವಾಯಲದ ದೇವರುಗಳ ಪ್ರತಿಷ್ಠಾಪನೆಯನ್ನು ಜಾಬಗೆರೆಯ ಗುರುಗಳಾದ ನಾಗೇಶ್ , ಹಳಿಯೂರು ಗ್ರಾಮದ ಪ್ರಖ್ಯಾತ ಜೋಯಿಸರಾದ ಸುಬ್ರಮಣ್ಯ ಮತ್ತು ದೇವರ ಗುಡ್ಡಪ್ಪ ರಾಮೇಗೌಡ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಮಾಡಲಾಯಿತು.

ದೇವಾಲಯದ ಉದ್ಘಾಟನೆಯ ಹಿನ್ನಲೆಯಲ್ಲಿ 21 ಗುರುವಾರ ಸಂಜೆ 6ರ ಗೋಧೂಳಿ ಸಮಯದಲ್ಲಿ ಯಾಗಾಶಾಲಾ ಪ್ರವೇಶ ಗಣಪತಿ ಪೂಜೆಯೊಂದಿಗೆ ಪ್ರಾರಂಭ, ಗಣಹೋಮ, ನವಗ್ರಹ ಹೋಮ, ಅಷ್ಟ ದಿಕ್ಷಾಲಕರ ಹೋಮ, ದುರ್ಗಾ ಹೋಮ, ಸರ್ವದೇವತಾ ಹೋಮ, ಪೂರ್ಣಾಹುತಿ, ನಂತರ ಮಂಗಳಾರತಿ, ಬಲಿಹರಣ, ಕೋಷ್ಕಾಂಡ ವೇದನ ಪ್ರಸಾದ ವಿತರಣೆ ನಡೆಯಿತು.

ಶುಕ್ರವಾರ ಬ್ರಾಡ್ಮಿಮುಹೂರ್ತ ಮುಂಜಾನೆ 4.30ರ ಸಮಯದಲ್ಲಿ ಗ್ರಾಮದ ಹೊರವಲಯದಲ್ಲಿ ಇರುವ ಮಲ್ಲನ ಕೊಳದಿಂದ ವಾದ್ಯಗೋಷ್ಠಿಗಳೊಂದಿಗೆ ಕಳಸ ಪೂಜೆ ಮಾಡಿ ಅದನ್ನು ಹೊತ್ತು ತಂದು ನಂತರ ಕಳಸ ಆರೋಹಣ- ಕಳಸ ಪ್ರತಿಸ್ಥಾಪನೆ ಮಾಡಿ ವಿವಿಧ ಬಗೆಯ ಹೂವಿನ ಅಲಂಕಾರದೊಂದಿಗೆ ವಿವಿಧ ಪೂಜಾ ಪುರಸ್ಕಾರ ಮತ್ತು ವಿವಿಧ ಹೋಮಗಳೊಂದಿಗೆ ನೇರವೇರಿಸಿ ದೇವರಗಳನ್ನು ಪ್ರತಿಷ್ಠಾಪನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಹಾಜರಿದ್ದ ಚಿಕ್ಕಕೊಪ್ಪಲು, ದೊಡ್ಡಕೊಪ್ಪಲು, ಕುಪ್ಪೆ, ಮುದ್ದನಹಳ್ಳಿ, ಕಟ್ಟೆಕೊಪ್ಪಲು, ವಡ್ಡರಕೊಪ್ಪಲು ಅಲ್ಲದೇ ಹುಣಸೂರು ತಾಲೂಕಿನ ಕಚುವನಹಳ್ಳಿ, ಹುಂಡಿಮಾಳದ ಭಕ್ತಾಧಿಗಳು ದೇವರುಗಳಿಗೆ ಪೂಜೆ ಪೂರಸ್ಕಾರವನ್ನು ನೇರವೇರಿಸಿ ತಮ್ಮ ಇಷ್ಟಾರ್ಥವನ್ನು ಈಡೇರಿಸುವಂತೆ ಪ್ರಾರ್ಥಿಸಿಕೊಂಡರು ಆನಂತರ ಭಕ್ತಾಧಿಗಳಿಗ ತೀರ್ಥ ಮತ್ತು ಅನ್ನಸಂತರ್ಪಣೆ ಕಾರ್ಯವನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಮೈಸೂರು ಯುವರಾಜ ಕಾಲೇಜಿನ ಪ್ರೊ.ಡಾ.ಸಿ.ಡಿ.ಪರುಶುರಾಮ್, ಹುಣಸೂರು ತಾ.ಪಂ.ಮಾಜಿ ಸದಸ್ಯೆ ಹುಂಡಿಮಾಳ ಸರಸ್ವತಿಸುರೇಶ್, ಗ್ರಾಮದ ಯಜಮಾನದ ಸತ್ಯಪ್ಪ, ಟಿ.ಪುರುಷೋತ್ತಮ್, ಹೊಸೂರು ಸಹಕಾರ ಸಂಘದ ಮಾಜಿ ಅಧ್ಯಕ್ಷ ಸಿ.ಡಿ.ಪ್ರಭಾಕರ್, ಮಾಜಿ ನಿರ್ದೇಶಕ ಶ್ರೀನಿವಾಸ್ , ನಿವೃತ್ತ ಶಿಕ್ಷಕರಾದ ಸಿ.ಎಲ್.ಕಾಳೇಗೌಡ, ಸಿ.ಜೆ.ಕುಚೇಲ್, ಶಿಕ್ಷಕ ಸಿ.ಎಲ್.ನಾಗೇಶ್, ಕೆ.ಎಂ.ಎಫ್. .ಮಾಜಿ ವಿಸ್ತರಾಣಾಧಿಕಾರಿ ಸಿ.ಎಚ್.ಸ್ವಾಮಿ,‌ ಮಾಜಿ ಗ್ರಾ.ಪಂ.ಉಪಾಧ್ಯಕ್ಷ ತಮ್ಮೇಗೌಡ ಕುಟುಂಬದ ದ್ರುವ, ವಿಶ್ವನಾಥ್,ನವೀನ್ ಕುಮಾರ್,ಮೋಹನ,ಋಷಿಕೇತು,ರಾಜಶಂಕರ್, ಶ್ರೀನಿವಾಸ್,ಹುಚ್ಚೇಗೌಡ , ಕಾಂತರಾಜು,ಶಿವಣ್ಣ, ಎಸ್.ಡಿ.ಎಂ.ಸಿ.ಮಾಜಿ ಅಧ್ಯಕ್ಷ ಸಿ.ಡಿ.ಜಗದೀಶ್, ದೇವಾಲಯದ ಕೋಲಕಾರ್ ಮಹದೇವ, ಅಂಗಡಿ ಜಲೇಂದ್ರ, ನೆರಳಕುಪ್ಪೆ ಡೈರಿ ಕಾರ್ಯದರ್ಶಿ ಗಣೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular